ಮಹಿಳಾ ಸಬಲೀಕರಣಕ್ಕೆ ಇನ್ನಷ್ಟು ಶಕ್ತಿ

celebration
ಮಹಿಳಾ ಮೀಸಲಾತಿ ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಕಲ್ಲೂರು ಮೇಘರಾಜ್, ಶಂಕ್ರಾನಾಯ್ಕಾ, ಮಂಜಪ್ಪ, ಟಿ.ಆರ್. ಕೃಷ್ಣಪ್ಪ, ಎಚ್.ಎಂ.ಸಂಗಯ್ಯ, ಸುರೇಶ್, ಗೋಪಾಲಕೃಷ್ಣ ಮುಂತಾದವರು ಸಿಹಿ ಹಂಚಿ ಸಂಭ್ರಮಿಸಿದರು.
Published on

ಶಿವಮೊಗ್ಗ: ಶಾಸನ ಸಭೆಗಳಲ್ಲಿ ಶೇ.33 ಮಹಿಳಾ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿರುವ ಹಿನ್ನೆಲೆಯಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಪದಾಧಿಕಾರಿಗಳು ಬುಧವಾರ ಡಿಸಿ ಕಚೇರಿ ಎದುರು ಸಹಿ ಹಂಚಿ ಸಂಭ್ರಮಿಸಿದರು.

ಮಹಿಳಾ ಮೀಸಲಾತಿ ಕಾಯ್ದೆ ರೂಪಿಸುವ ಸಂಬಂಧ ಲೋಕಸಭೆಯಲ್ಲಿ ಅನೇಕ ಪ್ರಯತ್ನಗಳು ನಡೆದಿವೆ. ಮಸೂದೆ ಮಂಡನೆಯಾದರೂ ಅದು ಸರ್ವಸಮ್ಮತವಾಗಿ ಸ್ವೀಕಾರವಾಗಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಲೂ ಪ್ರಯತ್ನ ನಡೆದಿತ್ತು. ಹಲವು ವರ್ಷಗಳಿಂದ ಈ ಮಸೂದೆ ನನೆಗುದಿಗೆ ಬಿದ್ದಿತ್ತು ಎಂದು ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದರು.
ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ಬಹುಮತ ಇರುವುದರಿಂದ ಹಾಗೂ ಅನೇಕ ಪಕ್ಷಗಳು ಈಗಾಗಲೇ ಇದಕ್ಕೆ ಬೆಂಬಲ ಘೋಷಿಸಿರುವುದರಿಂದ ಮಹಿಳಾ ಮೀಸಲಾತಿ ಮಸೂದೆ ಕಾಯ್ದೆಯಾಗಿ ರೂಪಪಡೆಯುವ ವಿಶ್ವಾಸವಿದೆ. ಇದರಿಂದ ಮಹಿಳಾ ಸಬಲೀಕರಣಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ ಎಂದರು.
ಟ್ರಸ್ಟಿಗಳಾದ ಎಚ್.ಎಂ.ಸಂಗಯ್ಯ, ಸುರೇಶ್, ಗೋಪಾಲಕೃಷ್ಣ, ಶಂಕ್ರಾನಾಯ್ಕಾ, ಮಂಜಪ್ಪ, ಟಿ.ಆರ್. ಕೃಷ್ಣಪ್ಪ, ಕೆ.ಆರ್. ಶಿವಣ್ಣ, ಬಿ.ಟಿ. ಮಂಜನಾಯ್ಕ, ಪುರದಾಳ್ ನಾಗರಾಜ್, ಚಿಕ್ಕಮಟ್ಟಿ ಗೋವಿಂದ ಸ್ವಾಮಿ, ಬಿ.ಟಿ.ಸೋಮಶೇಖರಯ್ಯ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net