24 ಗಂಟೆಯಲ್ಲಿ ಬೆಂಗಳೂರು ನಗರದಲ್ಲೇ ಹೆಚ್ಚು ಕರೊನಾ ಪ್ರಕರಣ ದಾಖಲು; ರಾಮನಗರದಲ್ಲೂ 2 ಕೇಸ್​

Suspected Coronavirus 15 march 20
Published on

ಬೆಂಗಳೂರು: ರಾಜ್ಯದಲ್ಲಿ ಅನ್​ ಲಾಕ್​-1 ಜಾರಿಯಾಗಿ ಎರಡು ದಿನ ಕಳೆದಿದ್ದೆ. ಹಾಗೇ 300-500ರವರೆಗೂ ಏರಿಕೆಯಾಗಿದ್ದ ಸೋಂಕಿತರ ಸಂಖ್ಯೆಯಲ್ಲೂ ಸ್ವಲ್ಪ ಮಟ್ಟಿಗೆ ಇಳಿಕೆ ಕಾಣುತ್ತಿದೆ.

ಕಳೆದ 24 ಗಂಟೆಯಲ್ಲಿ 120 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6041ಕ್ಕೆ ಏರಿದೆ. ಇಂದು 257 ಮಂದಿ ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದಾರೆ. ಅಲ್ಲಿಗೆ ಡಿಸ್​ಚಾರ್ಜ್​ ಆದವರ ಸಂಖ್ಯೆ 2862 ಆಗಿದೆ. ಇಂದು ಮೂವರು ಕೊವಿಡ್​-19ನಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 69ಕ್ಕೆ ಏರಿದೆ. 120 ಹೊಸ ಕೇಸ್​ಗಳಲ್ಲಿ 68 ಅಂತಾರಾಜ್ಯ ಪ್ರಯಾಣಿಕರಾಗಿದ್ದು, 3 ಮಂದಿ ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇದನ್ನೂ ಓದಿ: ಮಿತಿಮೀರುತ್ತಿರುವ ಕರೊನಾ ಆತಂಕದ ನಡುವೆ ಆದಿತ್ಯ ಠಾಕ್ರೆ ಕೊಟ್ರು ಗುಡ್​ನ್ಯೂಸ್​; ಇನ್ನು ಭಯ ಪಡುವ ಅಗತ್ಯವಿಲ್ಲ…

24 ಗಂಟೆಯಲ್ಲಿ ಇಂದು ಬೆಂಗಳೂರು ನಗರದಲ್ಲಿಯೇ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 42 ಪ್ರಕರಣಗಳು ದಾಖಲಾಗಿವೆ. ಯಾದಗಿರಿಯಲ್ಲಿ 27, ವಿಜಯಪುರ 13, ಕಲಬುರಗಿ 11, ಬೀದರ್​ 5, ದಕ್ಷಿಣ ಕನ್ನಡ 4, ಧಾರವಾಡ 4, ದಾವಣಗೆರೆ, ಹಾಸನ, ಬಳ್ಳಾರಿಯಲ್ಲಿ ತಲಾ 3, ಬಾಗಲಕೋಟೆ, ರಾಮನಗರದಲ್ಲಿ ತಲಾ 2, ಬೆಳಗಾವಿಯಲ್ಲಿ ಒಬ್ಬರಲ್ಲಿ ಕೊವಿಡ್​-19 ದೃಢಪಟ್ಟಿದೆ. ಇದನ್ನೂ ಓದಿ: ವಿದೇಶಿ ಮಹಿಳೆಯೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಹೋಗಿದ್ದವನಿಗೆ ಅಲ್ಲೇ ಕಾದಿತ್ತು ಸಾವು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net