ಶಿಕ್ಷಣದಲ್ಲಿ ಸಂಸ್ಕಾರದ ಪಾಠ ಮುಖ್ಯ

tth
20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಯಾದ ಕಟ್ಟೆಹಕ್ಕಲು-ಸೊಪ್ಪುಗುಡ್ಡೆ ರಸ್ತೆಯನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಆಶಾ ದೇವೇಂದ್ರ, ಹೆದ್ದೂರು ನವೀನ್ ಇತರರಿದ್ದರು.
Published on

ತೀರ್ಥಹಳ್ಳಿ: ಮುಂದುವರಿದ ಇಂತಹ ಕಾಲಘಟ್ಟದಲ್ಲೂ ನಡೆಯುತ್ತಿರುವ ಅಪರಾಧ ಪ್ರಕರಣಗಳು ದಿಗಿಲು ಹುಟ್ಟಿಸುವಂತಿವೆ. ಈ ಮನಸ್ಥಿತಿ ಬದಲಿಸುವ ಗುಣಮಟ್ಟದ ಶಿಕ್ಷಣ ಇಂದಿನ ಅನಿವಾರ್ಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಕಟ್ಟೆಹಕ್ಕಲು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿವೆ. ದುಷ್ಕರ್ಮಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ಕಾಣಬೇಕಾದರೆ ಕ್ರೌರ್ಯದ ಮಾನಸಿಕತೆ ಬದಲಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯ ಎಂದು ಹೇಳಿದರು.

ಅಪರಾಧಗಳಲ್ಲಿ ತೊಡಗಿರುವವರು ಅಕ್ಷರಸ್ಥರು ಎಂಬುದೇ ಚಿಂತೆಗೆ ಕಾರಣ. ಪ್ರೆಶರ್ ಕುಕ್ಕರ್ ಬಾಂಬ್ ತಯಾರಿಸಿರುವ ಭಯೋತ್ಪಾದಕ ನಮ್ಮ ತಾಲೂಕಿನವನು. ಆತ ಇಂಜಿನಿಯರಿಂಗ್ ಪದವೀಧರ ಎಂಬುದು. ಮನುಷ್ಯತ್ವದೊಂದಿಗೆ ಭಾವಿ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಂಸ್ಕಾಯುತ ಶಿಕ್ಷಣ ನೀಡಬೇಕಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಯೋಜನೆಯಡಿ ಈಚೆಗೆ ಪಟ್ಟಣದಲ್ಲಿ ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಸ್ವೆಟರ್ ವಿತರಣೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ ಎಂಬ ಕಾರಣಕ್ಕೆ ಬಿಇಒ ವೈ.ಗಣೇಶ್ ವಿರುದ್ಧ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ನಡೆಸಿದ್ದಾರೆ. ತಮಗೆ ವೇದಿಕೆ ಸಿಗಲಿಲ್ಲ ಎಂಬ ಕಾರಣಕ್ಕೆ ಕಿರಾತಕ ಮನಸ್ಸಿನವರು ಬಿಇಒ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಪ್ರಾಮಾಣಿಕ ಅಧಿಕಾರಿಗೆ ಅವಮಾನ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಮಾಡಲಾಗದವರಿಂದ ನಡೆದಿರುವ ಈ ಘಟನೆ ಇಡೀ ತಾಲೂಕಿಗೆ ಆದ ಅವಮಾನ ಎಂದು ಕಿಡಿಕಾರಿದರು.

ಕಟ್ಟೆಹಕ್ಕಲು ಗ್ರಾಪಂ ಅಧ್ಯಕ್ಷೆ ಆಶಾ ದೇವೇಂದ್ರ, ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್, ವೇದಮೂರ್ತಿ, ಪ್ರಕಾಶ್, ಸತೀಶ್ ಭಟ್, ನಾಗರಾಜ್, ಮಲ್ಲೇಶಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net