ಇಂದು ಭಾರೀ ಮಳೆಯ ಸಾಧ್ಯತೆ, ಯಲ್ಲೋ ಅಲರ್ಟ್​ ಘೋಷಣೆ

rrr
Published on

Weather update: 15-09-2022: ಕೊಡಗು ಹಾಗೂ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ;್ಲೆಗಳಿಗೆ ಯಲ್ಲೋ ಅಲರ್ಟ್​ ಘೋಷಿಸಲಾಗಿದೆ.


ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್​ ಘೋಷಿಸಲಾಗಿದೆ. ಸೆಪ್ಟಂಬರ್​​ 21 ರವರೆಗೂ ಈ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ.


ಇನ್ನು ಉತ್ತರಪ್ರದೇಶದಲ್ಲಿ ಸತತ ಮೂರು ದಿನಗಳ ಕಾಲ ಭಾರೀ ಮಳೆಯನ್ನು ಕಂಡಿದೆ. ರೈತರಿಗೆ ಮಳೆಯ ಹೊಡೆತ ಬಿದ್ದು, ತರಕಾರಿ ಬೆಳೆಗಾರರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ.


ರಾಜಧಾನಿ ಲಖನೌ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಪರಿಸ್ಥಿತಿ ಶೋಚನೀಯವಾಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಲಖಿಂಪುರ ಮತ್ತು ಬಾರಾಬಂಕಿ ಜಿಲ್ಲೆಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಗಳವಾರ ಪ್ರಾಥಮಿಕದಿಂದ 12ನೇ ತರಗತಿವರೆಗೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.


​ಜೂನ್ 1 ರಿಂದ ಸೆಪ್ಟೆಂಬರ್ 12 ರವರೆಗಿನ ಅವಧಿಯಲ್ಲಿ ಶ್ರಾವಸ್ತಿ ಜಿಲ್ಲೆಯಲ್ಲಿ ಉತ್ತರಪ್ರದೇಶದ ಭತ್ತ ಇನ್ನೂ ಹೂ ಬಿಡುವ ಹಂತದಲ್ಲಿದ್ದು, ಮಳೆಯಿಂದ ಅನುಕೂಲವಾಗಿದೆ.


ಪಶ್ಚಿಮ ಯುಪಿಯ ಮೊರಾದಾಬಾದ್ ಮತ್ತು ಬಾಗ್ಪತ್ ಜಿಲ್ಲೆಗಳಲ್ಲಿ ತರಕಾರಿ ಬೆಳೆಯುವ ರೈತರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಅನಿರೀಕ್ಷಿತ ಮಳೆಯಿಂದಾಗಿ ಕ್ಯಾರೆಟ್ ಮತ್ತು ಮೆಣಸಿನಕಾಯಿ ಬೆಳೆಗಳು ಹಾಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net