ಬಿಜೆಪಿ ಪಕ್ಷದ ಬಂಟಿಂಗ್ಸ್​ಗೆ ಸಿಲುಕಿ ಪ್ರಾಣ ಕಳೆದುಕೊಂಡ ಕೋತಿ!

ಕೋತಿ ಸಾವು (1)
Published on

ದೇವನಹಳ್ಳಿ: ಚುನಾವಣಾ ಸಮಯ ಸಮೀಪಿಸುತ್ತಿದ್ದಂತೆ ಯಾವುದೇ ಊರಿಗೆ ತೆರಳಿದರೂ ಪ್ರಚಾರದ ಉದ್ಧೇಶಕ್ಕಾಗಿ ಅಳವಡಿಸಿರುವ ಬ್ಯಾನರ್, ಬಟಿಂಗ್ಸ್ ಕಾಣಸಿಗುತ್ತದೆ. ಇದೀಗ ದೊಡ್ಡಬಳ್ಳಾಪುರ ತಾಲೂಕಿನ ಆರೂಡಿ ಗ್ರಾಮದಲ್ಲಿ ಪ್ರಚಾರಕ್ಕಾಗಿ ಕಟ್ಟಿದ್ದ ಬಂಟಿಂಗ್ಸ್​ಗೆ ಕೋತಿಯೊಂದು ಸಿಲುಕಿ ಪ್ರಾಣ ಬಿಟ್ಟಿದೆ.

ಕಾರ್ಯಕರ್ತರು ಬಂಟಿಗ್ಸ್​ಗಳನ್ನು ಮರಕ್ಕೆ ಕಟ್ಟಿದ್ದರು. ಕೋತಿಯೊಂದು ಮರದಲ್ಲಿದ್ದ ಬಂಟಿಂಗ್ಸ್​ಗಳಲ್ಲಿ ಆಟವಾಡಲು ಮುಂದಾಗಿದೆ. ಈ ವೇಳೆ ಕುತ್ತಿಗೆಗೆ ಸುತ್ತಿಕೊಂಡ ಬಂಟಿಂಗ್ಸ್ ಕೋತಿ ನರಳಾಡುವಂತೆ ಮಾಡಿದೆ. ಬಿಗಿಯಾಗಿ ಕುತ್ತಿಗೆಗೆ ಬಂಟಿಂಗ್ಸ್​ ಸುತ್ತಿಕೊಂಡ ಕಾರಣ ಕೋತಿ ಉಸಿರುಗಟ್ಟಿ ಸಾವನ್ನಪ್ಪಿದೆ.

ಗ್ರಾಮದಲ್ಲಿ ಬಿಜೆಪಿ ಕಾರ್ಯಕ್ರಮಕ್ಕಾಗಿ ಕಾರ್ಯಕರ್ತರು ಬಂಟಿಂಗ್ಸ್ ಕಟ್ಟಿದ್ದರು. ಇದೀಗ ಬಂಟಿಂಗ್ಸ್​ಗೆ ಮೂಖ‌ ಪ್ರಾಣಿ ಬಲಿಯಾಗಿರುವುದಕ್ಕೆ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net