

ನವದೆಹಲಿ: ಈಗ ಲಾಕ್ಡೌನ್ ಸಮಯದಲ್ಲಿ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದರೂ, ಇನ್ನು ಕೆಲವರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೂ ಇಲ್ಲೊಂದು ವಿಚಿತ್ರ ಸಂಗತಿ ಕಂಡುಬಂದಿದೆ. ಅದೇನೆಂದರೆ ಕೆಲಸ ಸಿಗುವುದೂ ಕಷ್ಟವಾಗಿರುವ ಈ ಕರೊನಾ ಸಂಕಷ್ಟದ ಕಾಲದಲ್ಲಿ ಕೋತಿಗೂ ಕೆಲಸ ಸಿಕ್ಕಿದೆ.
ಹೌದು.. ಟೀ ಸ್ಟಾಲ್ವೊಂದರಲ್ಲಿ ಕೋತಿಗೂ ಕೆಲಸ ಸಿಕ್ಕಿದೆ. ಚಹಾ ಮಾರಾಟದ ಈ ಅಂಗಡಿಯಲ್ಲಿ ಕೋತಿಯೇ ಕ್ಲೀನರ್ ಆಗಿ ತಟ್ಟೆ ತೊಳೆಯುತ್ತಿರುವ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 'ಯಾವ ಕೆಲಸವೂ ಸಣ್ಣದಲ್ಲ, ಕೆಲಸಕ್ಕಿಂತ ದೊಡ್ಡ ಧರ್ಮವಿಲ್ಲ' ಎಂದು ಹಿಂದಿ ಸಿನಿಮಾದ ಸಂಭಾಷಣೆ ಕೂಡ ವಿಡಿಯೋದಲ್ಲಿದೆ. ಉತ್ತರ ಭಾರತ ಕಡೆಯದ್ದು ಎನ್ನಲಾಗಿರುವ ಈ ವಿಡಿಯೋ ಎಲ್ಲಿಯದ್ದು ಎಂಬ ಖಚಿತ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.