ರೈಲ್ವೇ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಕೋತಿ; ಇದು ​​ಸರ್ಕಾರಿ ನೌಕರಿ ಕೋತಿಗೆ ನಮಗಿಂತಲೂ ಬೇಗ ಮದುವೆಯಾಗುತ್ತೆ ಎಂದ ನೆಟ್ಟಿಗರು​​

mmix
Published on

Viral video: ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ತುಂಟಾಟದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ಹೆಚ್ಚು ತಮಾಷೆಯಾಗಿರುತ್ತದೆ. ಅಂತಹ ವಿಡಿಯೋಗಳು ಮನಗೆಲ್ಲುವುದಂತೂ ಸತ್ಯ. ಅಂಥಹುದೇ ಒಂದು ವಿಡಿಯೋ ಇದೀಗ ವೈರಲ್ ಆಗಿದೆ.


ರೈಲ್ವೆ ಅಧಿಕಾರಿಯ ಮೇಜಿನ ಮೇಲೆ ಲಂಗೂರ್​ ಜಾತಿಯ ಕೋತಿಯೊಂದು ಕುಳಿತಿರುವಂತಹ ದೃಶ್ಯ ಇದೀಗ ಸಾಮಾಜಿಕ ಜಾಲತಾನದಲ್ಲಿ ವೈರಲ್​ ಆಗಿದೆ. ಕಚೇರಿಯ ಕುರ್ಚಿಯ ಮೇಲೆ ಆರಾಮವಾಗಿ ಕುಳಿತಿರುವ ಕೋತಿ ಸುಮ್ಮನೆ ಕುಳಿತಿಲ್ಲ ಬದಲಾಗಿ ಎಲ್ಲಾ ಫೈಲ್​​ಗಳನ್ನ ಚೆಕ್​​​ ಮಾಡುತ್ತಲಿದೆ. ಜೊತೆಗೆ ಕೋತಿಯು ಕಚೇರಿಯ ಕೆಲಸದಲ್ಲಿ ಫುಲ್​​ ಬ್ಯುಸಿಯಾಗಿರುವಂತೆ ಕಾಣಿಸುತ್ತಿದೆ.


ಈ ದೃಶ್ಯ ಪಶ್ಚಿಮ ಬಂಗಾಳದ ರೇಲ್ವೇ ಸ್ಟೇಶನ್​​​ ಒಂದರಲ್ಲಿ ಕಂಡು ಬಂದಿರೋದು ಎನ್ನಲಾಗಿದೆ. ಕೋತಿಯು ಮನುಷ್ರು ಯಾವ ರೀತಿ ಕಚೇರಿಗೆ ಹೋಗಿ ಅಲ್ಲಿದ್ದ ಫೈಲ್​​​ಗಳನ್ನ ಹುಡುಕುತ್ತಿರುತ್ತಾರೆಯೋ ಅದೇ ರೀತಿ ಎಲ್ಲಾ ಫೈಲ್​ಗಳನ್ನ ಪರಿಶೀಲಿಸುತ್ತಿದೆ. ಇನ್ನು ಈ ಕೋತಿಯನ್ನ ನೋಡಲು ಜನಸಮೂಹವೃ ಕಚೇರಿಯ ಮುಂದೆ ಜಮಾಯಿಸಿದೆ.


ಹೀಗೆ ಕಚೇರಿಯಲ್ಲಿ ಕುಳಿತಿರುವ ಕೋತಿಯ ದೃಶ್ಯ ನೆಟ್ಟಿಗರನ್ನ ನಗೆಹನಿಗೀಡು ಮಾಡಿದೆ. ಓರ್ವ ವ್ಯಕ್ತಿ ಈ ಕೋತಿ ಸರ್ಕಾರಿ ನೌಕರಿ ಮಾಡುತ್ತಲಿದ್ದು, ನಮಗಿಂತಲೂ ಬೇಗನೆ ಕೋತಿಯ ಮದುವೆಯಾಗುತ್ತೆ ಎಂದು ಕಾಮೆಂಟ್​​ ಮಾಡಿದ್ದಾರೆ. ಮತ್ತೋರ್ವ ವ್ಯಕ್ತಿ, ಕೋತಿ ಕೆಲಸದಲ್ಲಿ ಮಗ್ನವಾಗಿದೆ ಅದನ್ನ ಡಿಸ್​​​ಟರ್ಬ್​​​ ಮಾಡ್ಬೇಡಿ ಅಂತಾ ಟ್ವೀಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net