ಬೆಕ್ಕಿನ ಮರಿಯನ್ನು ಎದೆಗವಚಿಕೊಂಡು ತಿರುಗಾಡುತ್ತಿರುವ ಕೋತಿ…!

monkey
Published on

ಉತ್ತರಾಖಂಡ: ತಾಯಿಯ ಪ್ರೀತಿಗೆ ಕೊನೆಯಿಲ್ಲ. ತಾಯಿ ಪ್ರೀತಿ, ಕಾಳಜಿ ಬಗ್ಗೆ ವರ್ಣಿಸಲಸಾಧ್ಯ. ಮನುಷ್ಯರು ಮಾತ್ರವಲ್ಲ, ಪ್ರಾಣಿಗಳು ಕೂಡ ತಮ್ಮ ಮಕ್ಕಳ ಕಾಳಜಿವಹಿಸುವ ಬಗ್ಗೆ ನಾವು ನೋಡಿರುತ್ತೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ಕೋತಿ ತನ್ನ ಮರಿಯ ಬದಲಾಗಿ ಬೇರೊಂದು ಪ್ರಾಣಿಯ ಮರಿಯನ್ನು ಎದೆಗವಚಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಹೌದು, ಉತ್ತರಾಖಂಡದ ತೆಹ್ರಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ ಬಳಿ ಕೋತಿಯೊಂದು ಬೆಕ್ಕಿನ ಮರಿಯನ್ನು ತನ್ನ ಎದೆಗೆ ಅಂಟಿಕೊಂಡು ತಿರುಗಾಡುತ್ತಿದೆ. ಇದೀಗ ಕೋತಿ ಮತ್ತು ಮರಿ ಬೆಕ್ಕಿನ ನಡುವಿನ ಪ್ರೀತಿಯನ್ನು ನೋಡಲು ಅಪಾರ ಜನಸ್ತೋಮ ನೆರೆದಿದೆ. ಬೇರೆ ಬೇರೆ ಜಾತಿಯ ಪ್ರಾಣಿಗಳು ಬೇರೆ ಜಾತಿಯ ಮರಿಗಳಿಗೆ ಪ್ರೀತಿ ತೋರಿದ ಇಂತಹ ಹಲವಾರು ಪ್ರಕರಣಗಳು ಈ ಹಿಂದೆಯೂ ಕಂಡುಬಂದಿವೆ.

ವಿಶೇಷವೆಂದರೆ ಜನರು ಕೋತಿಯ ಬಳಿ ಹೋದ ತಕ್ಷಣ, ಅದು ಬೆಕ್ಕಿನ ಜೊತೆ ಓಡಿಹೋಗುತ್ತದೆ. ಬೆಕ್ಕಿನ ಮರಿ ಕೋತಿಯನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತದೆ. ಕೋತಿಗಳು ಹಲವಾರು ಭಾಗಗಳಲ್ಲಿ ಕಂಡುಬರುತ್ತವೆ. ಭಾರತೀಯರು ಸಹ ಅವುಗಳೊಂದಿಗೆ ಭಾವನಾತ್ಮಕ ಬಂಧವನ್ನು ಹಂಚಿಕೊಳ್ಳುತ್ತಾರೆ. ಬೆಕ್ಕಿನ ಮರಿಗಳನ್ನು ಸಹ ಇಷ್ಟಪಡುತ್ತಾರೆ. ಪರಸ್ಪರ ದ್ವೇಷ ಮಾಡುವ ಮನುಷ್ಯರ ನಡುವೆ ಈ ಕೋತಿ ಪ್ರೀತಿ ವಾತ್ಸಲ್ಯ ಎಲ್ಲರಿಗೂ ಅದ್ಭುತ ಸಂದೇಶ ಸಾರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net