More

    ಈ ವಾರದ ಕನ್ನಡ ಸೀರಿಯಲ್​​​​ಗಳ ಟಿಆರ್​​​​​ಪಿ; ಭಾರೀ ಪೈಪೋಟಿಯಲ್ಲಿರುವ ಧಾರಾವಾಹಿಗಳಿವು…

    ಬೆಂಗಳೂರು: ಎಂದಿನಂತೆ ಈ ವಾರದ ಟಿಆರ್​​​ಪಿ ವರದಿ ಬಂದಿದ್ದು, ಯಾವ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆ ಅಲ್ಲವೇ. ಬನ್ನಿ ನಿಮ್ಮ ನೆಚ್ಚಿನ ಧಾರಾವಾಹಿಗಳು ಯಾವ ಸ್ಥಾನದಲ್ಲಿವೆ ಒಮ್ಮೆ ನೋಡೋಣ…

    ಪುಟ್ಟಕ್ಕ ನಂ1
    ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನಂ 1 ಸ್ಥಾನದಲ್ಲಿದೆ. ಹೆಚ್ಚು ಕಡಿಮೆ ಮೊದಲಿನಿಂದಲೂ ನಂ1 ಸ್ಥಾನವನ್ನೇ ಉಳಿಸಿಕೊಂಡು ಬಂದಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಕಥಾಹಂದರವು ಮುಂದೇನಾಗಬಹುದು ಎಂಬ ಕುತೂಹಲವನ್ನು ಉಳಿಸಿಕೊಂಡಿರುವುದರಿಂದ ಟಿಆರ್‌ಪಿಯಲ್ಲಿ ಮುಂದಿದೆ. ಪುಟ್ಟಕ್ಕನ ಮಕ್ಕಳಿಗೆ ಪೈಪೋಟಿ ಕೊಡುತ್ತಲೇ ಬಂದಿರುವ ‘ಗಟ್ಟಿಮೇಳ’ ಟಿಆರ್​​ಪಿ ಕೂಡ ಗಮನಾರ್ಹವಾಗಿ ಏರಿಕೆ ಕಂಡಿದೆ.

    ಯಶಸ್ವಿಯಾಗಿ ಮುನ್ನುಗ್ಗುತಿದೆ ‘ಅಮೃತಧಾರೆ’
    ಪ್ರೊಮೊ ಬಿಡುಗಡೆಯಾದಾಗಿನಿಂದ ಹಿಡಿದು ಇಲ್ಲಿಯ ತನಕ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವ ‘ಅಮೃತಧಾರೆ’ ಕೆಲವು ವಾರಗಳಿಂದ ಮೂರನೇ ಸ್ಥಾನದಲ್ಲಿದೆ. ವೀಕ್ಷಕರ ಸಂಖ್ಯೆ ಕೂಡ ಹೆಚ್ಚಾಗಿದೆ.

    ಟಾಪ್ 4 ರಲ್ಲಿ ಶ್ರೀರಸ್ತು ಶುಭಮಸ್ತು
    ಶ್ರೀರಸ್ತು ಶುಭಮಸ್ತು ಧಾರಾವಾಹಿ ಕಳೆದ ವಾರ ಟಾಪ್ 5 ಸ್ಥಾನದಲ್ಲಿತ್ತು. ಆದರೀಗ ಟಾಪ್ 4ಗೆ ಬಂದಿದೆ. ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಹಿರಿಯ ನಟಿ ಸುಧಾರಾಣಿ, ಮಾಧವ್ ಪಾತ್ರದಲ್ಲಿ ಅಜಿತ್ ಹಂದೆ ಗಮನಸೆಳೆಯುತ್ತಿದ್ದಾರೆ. ಸತ್ಯ ಟಾಪ್ 5 ಸ್ಥಾನ ಪಡೆದುಕೊಂಡಿದೆ. ಆದರೆ ಕಳೆದ ವಾರ ಇದರ ಸ್ಥಾನದಲ್ಲಿ ನಮ್ಮ ಲಚ್ಚಿ ಧಾರಾವಾಹಿ ಇತ್ತು ಎಂಬುದು ವಿಶೇಷ. ಇನ್ನು ಆರನೇ ಸ್ಥಾನದಲ್ಲಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿ, ಏಳನೇ ಸ್ಥಾನದಲ್ಲಿ ಲಕ್ಷ್ಮೀ ಬಾರಮ್ಮ, ಎಂಟನೇ ಸ್ಥಾನದಲ್ಲಿ ನೀನಾದೆನಾ, ಒಂಬತ್ತನೇ ಸ್ಥಾನದಲ್ಲಿ ನಮ್ಮ ಲಚ್ಚಿ ಹಾಗೂ ಹತ್ತನೇ ಸ್ಥಾನದಲ್ಲಿ ಭಾಗ್ಯ ಲಕ್ಷ್ಮೀ ಇದೆ.

    ‘ಸೀತಾ ರಾಮ’
    ಈ ವಾರದಿಂದ ಪ್ರಸಾರವಾಗುತ್ತಿರುವ ಸೀತಾ ರಾಮ ಕೂಡ ಮುಂದಿನ ವಾರ ಟಿಆರ್​​ಪಿ ನಲ್ಲಿ ರೇಸ್​​​ನಲ್ಲಿರಬಹುದು ಎಂಬುದು ಕಿರುತೆರೆ ವೀಕ್ಷಕರ ಅಭಿಪ್ರಾಯ.

    ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ತಾಯಿ; ಆಮೇಲಾಗಿದ್ದು ಮಾತ್ರ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts