ಸಾವಿನ ಮನೆಗೆ ಬಂದು ಮೃತ ವ್ಯಕ್ತಿಗೆ ಮುತ್ತಿಟ್ಟ ಮಂಗ! Video Viral

Video Viral
Published on

Video Viral: ಮುಗ್ದ ಪ್ರಾಣಿಗಳಿಗೆ ಸಹಾಯ ಮಾಡಿದರೆ ಅವುಗಳು ಆ ಮನುಷ್ಯನಿಗೆ ತೋರುವ ಪ್ರೀತಿ, ಕಾಳಜಿ ಅಪಾರ. ಅಂತಹ ಅನೇಕ ಉದಾಹರಣೆಗಳನ್ನು ನಾವು ನೊಡಿದ್ದೇವೆ. ಅದೇ ರೀತಿ ಇಲ್ಲೊಂದು ಮಂಗ ತನಗೆ ಆಹಾರ ನೀಡುತ್ತಿದ್ದ ವ್ಯಕ್ತಿ ಸತ್ತಾಗ ಅವರ ಮನೆಗೆ ಬಂದು ಶೋಕ ವ್ಯಕ್ತಪಡಿಸುತ್ತಿರುವ ಹೃದಯಸ್ಪರ್ಶಿ ಕ್ಷಣ ವಿಡಿಯೋದಲ್ಲಿ ಸೆರೆಯಾಗಿದ್ದು, ಸಖತ್​​ ವೈರಲ್​ ಆಗಿದೆ.

ಮುನ್ನಾ ಸಿಂಗ್ ಎಂಬ ಆ ವ್ಯಕ್ತಿ ತನ್ನ ಗ್ರಾಮದಲ್ಲಿ ಪ್ರಾಣಿಗಳ ಮೇಲಿನ, ವಿಶೇಷವಾಗಿ ಮಂಗಗಳ ಮೇಲಿನ ಪ್ರೀತಿ ಮತ್ತು ಕಾಳಜಿಗೆ ಹೆಸರುವಾಸಿಯಾಗಿದ್ದನು. ಅವನು ಆಗಾಗ್ಗೆ ಅವುಗಳಿಗೆ ರೊಟ್ಟಿ ಮತ್ತು ಇತರ ಆಹಾರವನ್ನು ನೀಡುತ್ತಿದ್ದನು.

ಆದರೆ ಸಿಂಗ್ ನಿಧನರಾದಾಗ ಮತ್ತು ಅವರ ದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ನೆಲದ ಮೇಲೆ ಇಡಲಾಗುತ್ತಿದ್ದಂತೆ, ಒಂದು ಮಂಗ ಅವರ ಬಳಿಗೆ ಬಂದು ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದೆ.

ದಿಯೋಘರ್​​​ನಲ್ಲಿ ನಡೆದ ಈ ಹೃದಯಸ್ಪರ್ಶಿ ಕ್ಷಣ ದೇಶದಾದ್ಯಂತ ಎಲ್ಲರ ಹೃದಯಗಳನ್ನು ಮಿಡಿಯುವಂತೆ ಮಾಡಿದೆ.

ಮೃತ ವ್ಯಕ್ತಿಗೆ ಮುತ್ತಿಟ್ಟ ಮಂಗ

ಅಂತಿಮ ದರ್ಶನಕ್ಕಾಗಿ ಸಿಂಗ್​​ ಅವರ ಮೃತದೇಹವನ್ನು ಮನೆಯ ಹೊರಗೆ ಇರಿಸಿದಾಗ, ಒಂದು ಮಂಗ ಮುನ್ನಾ ಸಿಂಗ್ ಅವರ ಬಳಿ ನಿಧಾನಕ್ಕೆ ಬಂದು ಚುಂಬಿಸಿ, ನಂತರ ಅವರ ಪಕ್ಕದಲ್ಲಿ ಗಂಟೆಗಟ್ಟಲೆ ಕುಳಿತಿತ್ತು. ಈ ಘಟನೆಯೂ ಅಲ್ಲಿ ನೆರೆದಿದ್ದ ಜನರ ಕಣ್ಣಲ್ಲಿ ನೀರೂರಿಸಿತು.

ನಂತರ ಆ ಮಂಗ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಸೇರಿಕೊಂಡಿತು, ಗೌರವದ ಸಂಕೇತವಾಗಿ, ಅನೇಕ ಗ್ರಾಮಸ್ಥರು ಮಂಗಕ್ಕೆ ನಮಸ್ಕರಿಸಿದರು.

ನೆಟ್ಟಿಗರು ಹೇಳಿದ್ದೇನು? ಈ ಹೃದಯಸ್ಪರ್ಶಿ ದೃಶ್ಯದ ವಿಡಿಯೋ ಸಖತ್​​ ವೈರಲ್​ ಆಗುತ್ತಿದ್ದಂತೆಯೇ, ಸಾವಿರಾರು ಜನರು ಮಂಗನ ಕೆಲಸದಿಂದ ಭಾವುಕರಾದರು ಮತ್ತು ಪ್ರಾಣಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಬಾಂಧವ್ಯವನ್ನು ಶ್ಲಾಘಿಸಿದರು. ಒಬ್ಬ ನೆಟ್ಟಿಗ "ಈ ವಿಡಿಯೋವು ಅಗಲಿದ ಆತ್ಮಕ್ಕೂ ಕೋತಿಗೂ ಇರುವ ಸಂಬಂಧದ ಬಗ್ಗೆ ಬಹಳಷ್ಟು ಹೇಳುತ್ತದೆ. ಆತ್ಮವು ಕೋತಿಯನ್ನು ನೋಡಿಕೊಂಡಿರಬೇಕು. ಇದು ಅವನಿಗೆ ಅಂತಿಮ ಮತ್ತು ಕೊನೆಯ ವಿದಾಯ" ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು "ಜೈ ಬಜರಂಗಬಲಿ," ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net