ಪುಟ್ಟ ಮಗುವಿನ ಮೇಲೆ ಮಂಗನ ದಾಳಿ; ತಲೆ, ಬೆನ್ನಿಗೆ ಗಂಭೀರ ಗಾಯ

Monkey Attack 9 Feb 20
Published on

ಗದಗ: ಮಂಗನ ದಾಳಿಗೆ ಎರಡೂವರೆ ವರ್ಷದ ಮಗುವೊಂದು ಗಂಭೀರ ಗಾಯಗೊಂಡಿದೆ.

ಕೆ.ಸಿ.ರಾಣಿ ರಸ್ತೆಯಲ್ಲಿರುವ ವಠಾರದಲ್ಲಿ ಘಟನೆ ನಡೆದಿದೆ. ಇಲ್ಲಿ ಮಂಗಗಳ ಹಾವಳಿ ಸಿಕ್ಕಾಪಟೆ ಮಿತಿಮೀರಿದ್ದು ಸ್ಥಳೀಯರು ಬೇಸತ್ತಿದ್ದಾರೆ. ಕಳೆದ 15 ದಿನಗಳಲ್ಲಿ ನಾಲ್ವರ ಮೇಲೆ ಮಂಗಗಳು ದಾಳಿ ಮಾಡಿವೆ.

ಪುಟ್ಟ ಮಗು ಆದ್ಯಾ ಮನೆ ಎದುರು ಆಟವಾಡುತ್ತಿದ್ದಳು. ಈ ವೇಳೆ ಕೋತಿ ದಾಳಿ ಮಾಡಿದ್ದು ಮಗುವಿನ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net