ಬೌದ್ಧ ಬಿಕ್ಕುವಿನ ಪ್ರಾಣ ತೆಗೆದ ಸಮೋಸಾ...

Samosa 30 June 20
Published on

ಮುಂಡಗೋಡ: ಇಲ್ಲಿನ ಟಿಬೆಟಿಯನ್​ ಕ್ಯಾಂಪ್​​ನಲ್ಲಿದ್ದ ಕಿರಿಯ ವಯಸ್ಸಿನ ಬೌದ್ಧ ಬಿಕ್ಕು ಸಮೋಸಾ ಗಂಟಲಲ್ಲಿ ಸಿಕ್ಕು ಮೃತಪಟ್ಟಿದ್ದಾರೆ.

ಮಂಗೋಲಿಯಾ ದೇಶದ ಬಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ (18) ಮೃತರು. ಇವರು ಸಮೋಸಾ ತಿನ್ನುತ್ತಿದ್ದಾಗ, ಅದು ಗಂಟಲಲ್ಲಿ ಸಿಕ್ಕಿದೆ. ಒಂದೇ ಸಮ ಬಿಕ್ಕಳಿಕೆ ಬರಲು ಶುರುವಾಗಿ ಉಸಿರಾಡಲಾಗದೆ ಸಾವನ್ನಪ್ಪಿದ್ದಾರೆ.

ಇವರು ಕ್ಯಾಂಪ್​ ನಂ.2ರ ಗೋಮಾಂಗ್​ ವಸತಿ ನಿಲಯದಲ್ಲಿ ವಾಸವಾಗಿದ್ದರು. ಮುಂಡಗೋಡ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net