

ಹೈದರಾಬಾದ್: ಚಿತ್ರನಟ ಮೋಹನ್ ಬಾಬು(Actor Mohan Babu) ಮೋಹನ್ ಬಾಬು ಮನೆಯಲ್ಲಿ ಕಳ್ಳತನ- ಕದ್ದವನು ಯಾರುಗೊತ್ತಾ?) ಮನೆಯಲ್ಲಿ ಕಳ್ಳತನವಾಗಿದೆ. ಹೈದರಾಬಾದ್ನ ಉಪನಗರ ಜಲಪಲ್ಲಿಯಲ್ಲಿಯ ಅವರ ನಿವಾಸದಲ್ಲಿ 10 ಲಕ್ಷ ರೂ. ಕಳ್ಳತನವಾಗಿರುವುದಾಗಿ ಸೆ.24(ಮಂಗಳವಾರ) ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೋಹನ್ ಬಾಬು ನೀಡಿದ ದೂರನ್ನು ದಾಖಲಿಸಿಕೊಂಡ ಬಂಜಾರ ಹಿಲ್ಸ್ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ನಾಯಕ್ ಎಂಬಾತನನ್ನು ಬಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮೋಹನ್ ಬಾಬು ಮನೆಯಲ್ಲಿ ಹಲವು ವರ್ಷಗಳಿಂದ ನಾಯಕ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕದ್ದ ಹಣದೊಂದಿಗೆ ನಾಯಕ್ ತಿರುಪತಿಗೆ ತೆರಳಿದ್ದ. ಅಲ್ಲಿ ಪೊಲೀಸರು ಅವನನ್ನು ಬಂಧಿಸಿದ್ದಾರೆ.
2019 ರಲ್ಲಿಯೂ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಮೋಹನ್ ಬಾಬು ಅವರ ಮನೆಯಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಲಾಗಿತ್ತು. ಆಗ ಮನೆ ಕೆಲಸದಾಕೆ ಹಣ, ಚಿನ್ನಾಭರಣ ಕಳವು ಮಾಡಿದ್ದರು.
ಮೋಹನ್ ಬಾಬು ಇತ್ತೀಚೆಗೆ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಪುತ್ರ ಮಂಚ ವಿಷ್ಣು ನಿರ್ಮಿಸುತ್ತಿರುವ ಬಿಗ್ ಬಜೆಟ್ ಚಿತ್ರ ಕಣ್ಣಪ್ಪದಲ್ಲಿ ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.