ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಎರಡನೇ ಹಂತದ ಮತದಾನ ಬುಧವಾರ ನಡೆಯುತ್ತಿದ್ದು, 15 ಮಂದಿಯ ವಿದೇಶಿ ರಾಜತಾಂತ್ರಿಕರ ತಂಡ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. Jammu and Kashmir Elections
ಇದನ್ನೂ ಓದಿ:‘Laapat ladies’ ಆ ಚಿತ್ರ ಆಸ್ಕರ್ ಪ್ರವೇಶಿಸಿದೆ, ಆದರೆ ಹೀರೋಯಿನ್ ಪ್ರಚಾರಕ್ಕಾಗಿ ಪರೀಕ್ಷೆ ಮಿಸ್ ಮಾಡಿಕೊಂಡಿದ್ರು!
ಚುನಾವಣೆ ನಡೆಯುತ್ತಿರುವ ಪ್ರದೇಶಗಳಿಗೆ ಭೇಟಿ ನೀಡಿದ ನಿಯೋಗ, ಮತಗಟ್ಟೆಗಳಲ್ಲಿ ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದ ಜನರೊಂದಿಗೆ ಮಾತನಾಡಿದರು. ದಶಕದ ನಂತರ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಮತದಾನ ವೀಕ್ಷಿಸಲು 15 ವಿದೇಶಿ ರಾಜತಾಂತ್ರಿಕರ ತಂಡ ಇಂದು ಬೆಳಗ್ಗೆ ಶ್ರೀನಗರ ತಲುಪಿತು.
ಆಂಡ್ರ್ಯೂಸ್ ನೇತೃತ್ವ:
ನಿಯೋಗದ ನೇತೃತ್ವವನ್ನು ಯುಎಸ್ ಡೆಪ್ಯೂಟಿ ಚೀಫ್ ಆಫ್ ಮಿಷನ್ ಜಾರ್ಗೆನ್ ಆಂಡ್ರ್ಯೂಸ್ ನೇತೃತ್ವ ವಹಿಸಿದ್ದಾರೆ. ರಾಜತಾಂತ್ರಿಕರ ಈ ಗುಂಪು ಇನ್ನೂ ಎರಡು ದಿನ ರಾಜ್ಯದಲ್ಲಿ ಪ್ರವಾಸ ಮಾಡಲಿದೆ. ಈ ಸಂದರ್ಭದಲ್ಲಿ ತಂಡವು ವಿವಿಧ ಸಮುದಾಯದ ಜನರನ್ನು ಭೇಟಿ ಮಾಡಲಿದೆ. ನಿಯೋಗದೊಂದಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಸಹ ಇದ್ದರು.
370 ನೇ ವಿಧಿ ರದ್ದು ಬಳಿಕ ಮೊದಲ ಚುನಾವಣೆ:
2019 ರಲ್ಲಿ ಮೋದಿ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿತು. ಆ ನಂತರ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಒಟ್ಟು 90 ಸ್ಥಾನಗಳಿವೆ. ಚುನಾವಣೆಯನ್ನು ಮೂರು ಹಂತದಲ್ಲಿ ನಡೆಸಲಾಗುತ್ತಿದೆ. ಸೆ.18 ರಂದು ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಬುಧವಾರ(ಸೆ.25)ಎರಡನೇ ಹಂತದ ಮತದಾನ ನಡೆಯುತ್ತಿದೆ. ಮೂರನೇ ಕಂತು ಅ.1 ರಂದು ನಡೆಯಲಿದೆ. ಮೊದಲ ಹಂತದಲ್ಲಿ ಶೇ.61ಕ್ಕೂ ಹೆಚ್ಚು ಮತದಾನ ನಡೆದಿದೆದೆ. ಫಲಿತಾಂಶ ಅ.8 ರಂದು ಪ್ರಕಟವಾಗಲಿದೆ.
ಟಾಟಾದ ಹೊಸ ಸ್ಕೀಮ್: ಹೆಚ್ಚು ರಿಸ್ಕ್ ಇಲ್ಲದೆ ರಿಟರ್ನ್ಸ್! | Tata LifeInsurance