ಎಷ್ಟೇ ಪ್ರಯತ್ನಿಸಿದ್ರೂ ಹಣ ಉಳಿಸಲು ಸಾಧ್ಯವಾಗ್ತಿಲ್ವಾ? ಈ ಟ್ರಿಕ್ಸ್​ ಅನುಸರಿಸಿದ್ರೆ ಸಾಕು ತುಂಬಾ ದುಡ್ಡು ಉಳಿಸಬಹುದು | Money Savings

Money Savings
Published on

Money Savings: ಹಣ ಗಳಿಸುವುದು ಕಷ್ಟ ಆದರೆ, ಖರ್ಚು ಮಾಡುವುದು ತುಂಬಾನೇ ಸುಲಭ ಎಂಬ ಮಾತಿದೆ. ಹಣ ಉಳಿಸಬೇಕೆಂದು ಅಂದುಕೊಂಡರೂ ಇಂದಿನ ಆಧುನಿಕ ಜಗತ್ತಿನಲ್ಲಿ ಅದು ಕಷ್ಟವೂ ಹೌದು. ಹಣ ಉಳಿಸುವುದು ಕೂಡ ಒಂದು ಕಲೆ ಎಂಬುದು ನೆನಪಿರಲಿ. ಆ ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಕಷ್ಟು ತಾಳ್ಮೆ ಮತ್ತು ಸ್ವಯಂ ನಿಯಂತ್ರಣ ಬೇಕಾಗುತ್ತದೆ. ನಿಧಾನವಾಗಿ ಹಣ ಉಳಿಸುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಬದುಕಿಗೆ ಒಂದು ಬಲ ಸಿಗುತ್ತದೆ. ಹೀಗಾಗಿ ಹಣ ಉಳಿಸುವ ಕೆಲ ಸಲಹೆಗಳು ಇಲ್ಲಿವೆ.

* ಕ್ರೆಡಿಟ್ ಕಾರ್ಡ್‌ಗಳನ್ನು ತ್ಯಜಿಸಿ: ನಿಮಗೆ ಹಣದ ಮೇಲೆ ಯಾವುದೇ ನಿಯಂತ್ರಣ ಇರದಿದ್ದರೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬೇಡಿ. ಏಕೆಂದರೆ, ಕಾರ್ಡ್ ಬಳಸಿ ನೀವು ಮನಬಂದಂತೆ ಖರ್ಚು ಮಾಡುತ್ತಲೇ ಇರುತ್ತೀರಿ. ಇಂತಹ ಕ್ರೆಡಿಟ್​ ಕಾರ್ಡ್‌ಗಳಿಂದ ಅನೇಕ ಜನರು ಸಾಲದಲ್ಲಿ ಸಿಕ್ಕಿಕೊಂಡಿದ್ದಾರೆ. ಹೀಗಾಗಿ ಹಣ ಉಳಿಸಲು ಕಾರ್ಡ್‌ಗಳಿಂದ ದೂರವಿರಬೇಕು.

* ಶಾಪಿಂಗ್​ಗೆ ಕಡಿವಾಣ​: ಮೋಜಿಗಾಗಿ ಶಾಪಿಂಗ್ ಮಾಲ್‌ಗೆ ಹೋಗುವ ಅಭ್ಯಾಸವನ್ನು ತಪ್ಪಿಸಿ. ಅಲ್ಲದೆ, ರಿಯಾಯಿತಿಗಳನ್ನು ಪರಿಶೀಲಿಸಲು ಆಗಾಗ ಆನ್​ಲೈನ್​ ಶಾಪಿಂಗ್​ ವೆಬ್​ಸೈಟ್​​ಗಳಿಗೆ ಭೇಟಿ ನೀಡುವುದನ್ನು ನಿರ್ಲಕ್ಷಿಸಿ. ಇದರಿಂದಾಗಿ ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನು ಸಹ ಖರೀದಿಸುತ್ತೀರಿ. ನಿಮಗೆ ನಿಜವಾಗಿಯೂ ಐಟಂ ಅಗತ್ಯವಿದ್ದರೆ ಮಾತ್ರ ಶಾಪಿಂಗ್ ಮಾಡಿ.

* ಶೂನ್ಯ ದಿನ: ಪ್ರತಿದಿನ ನೀವು ಕಾಫಿ ಅಥವಾ ಇನ್ನಾವುದಕ್ಕೋ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ವಾರದಲ್ಲಿ ಒಂದು ದಿನ, ಒಂದು ರೂಪಾಯಿ ಕೂಡ ಖರ್ಚು ಮಾಡಬೇಡಿ. ಈ ನಿಯಮವನ್ನು ಅಳವಡಿಸಿಕೊಳ್ಳಿ. ಇದು ನಿಮ್ಮ ಖರ್ಚಿನ ಅಭ್ಯಾಸಗಳ ಮೇಲೆ ನಿಯಂತ್ರಣವನ್ನು ನೀಡುತ್ತದೆ.

* ಪಾರ್ಟಿಗಳಿಗೆ ಕಡಿವಾಣ: ವಾರದ ಕೆಲಸದ ಒತ್ತಡವನ್ನು ನಿವಾರಿಸಲು ಪಾರ್ಟಿ ಮಾಡುವುದನ್ನು ನಿಲ್ಲಿಸಿ. ಇದು ನಿಮ್ಮ ಪಾಕೆಟ್​ ಅನ್ನು ಖಾಲಿ ಮಾಡುತ್ತದೆ. ನೀವು ನಿಜವಾಗಿಯೂ ಒತ್ತಡದಿಂದ ಪರಿಹಾರವನ್ನು ಬಯಸಿದರೆ, ಇತರ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.

* ಸಾಮಾಜಿಕ ಮಾಧ್ಯಮಕ್ಕೆ ದೂರ: ಜಾಲತಾಣದಿಂದ ಸ್ವಲ್ಪ ಅಂತ ಕಾಯ್ದುಕೊಳ್ಳಿ. ಏಕೆಂದರೆ, ಜಾಲತಾಣದ ಜಾಹಿರಾತುಗಳು ನಿಮ್ಮನ್ನು ಪ್ರಚೋದಿಸಿ, ಹಣ ಖರ್ಚು ಮಾಡುವಂತೆ ಮಾಡುತ್ತವೆ. ಹಾಗಾಗಿ ಸೋಷಿಯಲ್ ಮೀಡಿಯಾದಿಂದ ದೂರವಿದ್ದಷ್ಟು ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net