ಕೊಟ್ಟ ಹಣ ವಾಪಸ್ ಕೇಳಿದ ಯುವಕನ ಹತ್ಯೆಗೆ ಆರೋಪಿ ಮಾಡಿದ ಪ್ಲಾನ್ ಏನು ಗೊತ್ತಾ?

murder picv
Published on

ನೆಲಮಂಗಲ: ಕೊಟ್ಟ ಹಣ ವಾಪಸ್ ನೀಡುವಂತೆ ಕೇಳಿದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರು ಉತ್ತರ ತಾಲೂಕು ದೇವಣ್ಣನಪಾಳ್ಯದ ಮಂಜುನಾಥ್ (28 ವರ್ಷ) ಮೃತ ದುರ್ದೈವಿ. ಮೊದಲೇ ಬ್ರೈನ್ ಟ್ಯೂಮರ್​​ನಿಂದ ಬಳಲುತ್ತಿದ್ದ ಯುವಕನ ಮೇಲೆ ಹಲ್ಲೆಯಾಗಿದ್ದು, ಆತ ಸಾವನ್ನಪ್ಪಿದ್ದಾನೆ.

ದೇವಣ್ಣನಪಾಳ್ಯ ಗ್ರಾಮದ ಸಂತೋಷ್ ಎಂಬುವನಿಗೆ ಮೃತ ಯುವಕ ಹಣ ನೀಡಿದ್ದು, ವಾಪಸ್ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ಕುಪಿತಗೊಂಡ ಆರೋಪಿ ಕಳೆದ 10ನೇ ತಾರೀಖಿನಂದು ಬೈಕ್​​ನಿಂದ ಡಿಕ್ಕಿ ಹೊಡೆದು ಸಂತೋಷ್​ ಕುತ್ತಿಗೆ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಸಧ್ಯ ಹಲ್ಲೆ ನೆಡೆಸಿದ ಸಂತೋಷ್ ತಲೆಮರೆಸಿಕೊಂಡಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net