VIDEO: ಕಾಂಗ್ರೆಸ್ ನಾಶ ಮಾಡಲು ಹೊರಗಿನವರು ಬೇಡ್ವೇ ಬೇಡ, ಅಕ್ಕ-ತಮ್ಮನೇ ಸಾಕು ಎಂದ ಯೋಗಿ!

yogi
Published on

ಲಖನೌ: ಕಾಂಗ್ರೆಸ್ ನಾಶ ಮಾಡಲು ಹೊರಗಿನವರು ಬೇಡ್ವೇ ಬೇಡ, ಅಕ್ಕ-ತಮ್ಮನೇ ಸಾಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಒಡಹುಟ್ಟಿದವರು ಕಾಂಗ್ರೆಸ್‌ನ್ನು ನಾಶ ಮಾಡುತ್ತಾರೆ, ಹೊರಗಿನವರ ಅಗತ್ಯವೇ ಇಲ್ಲ. ತಲೆಕೆಡಿಸಿಕೊಳ್ಳುವುದೇ ಬೇಡ ಎಂದು ಅವರು ಹೇಳಿದರು.

ಉತ್ತರಾಖಂಡದ ಜನತೆಗೆ ಕಾಂಗ್ರೆಸ್‌ ಬೇಡವಾಗಿದೆ. ಅಲ್ಲಿ ಕೂಡ ಹೋಗಿ ಇದನ್ನೇ ನಾನು ಹೇಳಿದ್ದೇನೆ. ಕಾಂಗ್ರೆಸ್‌ ಕೊನೆಗಾಣಿಸಲು ಹೊರಗಿನವರ ಅಗತ್ಯವೇ ಇಲ್ಲ ಎಂದು. ಅಕ್ಕ-ತಮ್ಮನೇ ಸಾಕು ಎಂದಿದ್ದಾರೆ ಯೋಗಿ.

ಉತ್ತರ ಪ್ರದೇಶದಲ್ಲಿ ಫೆ.10ರಿಂದ ಚುನಾವಣೆ ಆರಂಭವಾಗಿದ್ದು, 7 ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್‌ 10 ರಂದು ಫಲಿತಾಂಶ ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net