

ಕೊಳ್ಳೇಗಾಲ(ಚಾಮರಾಜನಗರ): ಮನೆಯೊಳಗೆ ಗೋಡೆ ಮೇಲೆ ನೇತು ಹಾಕಿದ್ದ ಪ್ಯಾಂಟ್ ಒಂದನ್ನು ಕಿಟಕಿ ಮೂಲಕವೇ ಖತರ್ನಾಕ್ ಕಳ್ಳರು ದೋಚಿದ್ದು, ಪ್ಯಾಂಟಿನ ಮಾಲೀಕ 1 ಲಕ್ಷದ 40 ಸಾವಿರ ರೂ. ಕಳೆದುಕೊಂಡಿದ್ದಾರೆ.
ಅರೆ, ಆ ಒಂದು ಪ್ಯಾಂಟು ಕಳ್ಳತನ ಆಗಿದ್ದಕ್ಕೆ 1.4 ಲಕ್ಷ ರೂ. ನಷ್ಟವಾಯ್ತೆ? ಕಾಸ್ಟ್ಲೀ ಪ್ಯಾಂಟೇ ಎಂದೆಲ್ಲ ಅನ್ನಿಸೋದು ಸಹಜ. ಆದರೆ, ಪ್ಯಾಂಟ್ ಮಾಲೀಕ ಕಳೆದುಕೊಂಡದ್ದು ಪ್ಯಾಂಟಿನ ಜೇಬಿನಲ್ಲಿಟ್ಟ ಹಣವನ್ನ! ಹೌದು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ನೂರ್ ಮೊಹಲ್ಲಾದ 6ನೇ ಕ್ರಾಸ್ ಮನೆಯೊಂದರಲ್ಲಿ ದುಷ್ಕರ್ಮಿಗಳು ಕಿಟಕಿ ಮೂಲಕ ಲಕ್ಷಾಂತರ ರೂ. ಹಣ ಇಟ್ಟಿದ್ದ ಪ್ಯಾಂಟ್ ಅನ್ನೇ ಎಗರಿಸಿದ್ದಾರೆ.
ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹಗಳ ಡೀಲರ್ ಆಗಿರುವ ಇಲ್ಲಿನ ನಿವಾಸಿ ಅಪ್ಸರ್ಪಾಷ, ಬುಧವಾರ ರಾತ್ರಿ 1.4 ಲಕ್ಷ ರೂ. ನಗದನ್ನು ತನ್ನ ಪ್ಯಾಂಟ್ ಜೇಬಿನಲ್ಲಿಟ್ಟು, ಅದನ್ನು ಮನೆ
ಸ್ಥಳಕ್ಕೆ ಡಿವೈಎಸ್ಪಿ ಎನ್.ನವೀನ್ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಶೇಖರ್, ಪಿಎಸ್ಐಗಳಾದ ಅಶೋಕ್, ವೀರಭದ್ರಪ್ಪ ಅವರು ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡದೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.