

| ಸುಧಾಕರ ಶೆಟ್ಟಿ ಮಂಗಳೂರು
ಹೆಚ್ಚಿನ ಸಣ್ಣ ವ್ಯವಹಾರಗಳಿಗೆ ಸಾಮಾನ್ಯ ಹೊಣೆಗಾರಿಕೆ ಮತ್ತು ಆಸ್ತಿ ವಿಮೆಯ ಅಗತ್ಯವಿರುತ್ತದೆ. ನೀವು ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದ್ದರೆ, ನಿಮಗೆ ಬಹುಶಃ ಕಾರ್ವಿುಕರ ಪರಿಹಾರ ವಿಮೆಯ ಅಗತ್ಯವಿರುತ್ತದೆ. ಪ್ರತಿಯೊಂದು ಬಿಸಿನೆಸ್ ಸಹ ವೈವಿಧ್ಯಮಯವಾಗಿರುತ್ತದೆ. ನಿಮ್ಮ ವ್ಯವಹಾರದ ಸ್ವರೂಪ, ವ್ಯವಹಾರಕ್ಕೆ ಒಡ್ಡಿಕೊಳ್ಳುವ ಅಪಾಯಗಳು, ವಿಮಾದಾರ ಮತ್ತು ಉತ್ಪನ್ನದ ಸೇರ್ಪಡೆ ಮತ್ತು ಹೊರಗಿಡುವಿಕೆಗಳನ್ನು ಅವಲಂಬಿಸಿ ಪ್ರೀಮಿಯಂಗಳು ಬದಲಾಗುತ್ತವೆ.
ಕಾಂಪ್ರಹೆನ್ಸಿವ್ ಥರ್ಡ್ ಪಾರ್ಟಿ ಕವರೇಜ್, ಆಗ್ನಿ ಆಕಸ್ಮಿಕ, ಕಳ್ಳತನದಂತಹ ಸಂದರ್ಭಗಳಿಂದ ರಕ್ಷಣೆ ಪಡೆಯಿರಿ. ಉದ್ಯೋಗಿಗಳಿಗೆ ಪರಿಹಾರ ನೀಡಲು ಒಪ್ಪುವ ವಿಮೆಯನ್ನು ಆಯ್ಕೆ ಮಾಡಿ. ವಿಮೆ ಕೊಳ್ಳುವಾಗ ವೃತ್ತಿಪರ ಪರಿಹಾರ ಧನ (ಪೊ›ಫೆಷನಲ್ ಇಂಡೆಮ್ನಿಟಿ) ಕಡೆಗಣಿಸಬೇಡಿ. ಪಿಎಂಎವೈ ಸಬ್ಸಿಡಿ, ಗೊಂದಲ ಬೇಡ..!
| ಷರೀಫ್ ಕೆ ಎನ್ ದಾವಣಗೆರೆ ಷರೀಫ್ ಅವರೆ ರಿಜಿಸ್ಟ್ರೇಷನ್ ಶುಲ್ಕ, ಸ್ಟಾ್ಯಂಪ್ ಡ್ಯೂಟಿ ಮತ್ತು ಆಸ್ತಿ ವರ್ಗಾವಣೆಗೆ ಒಳಪಟ್ಟಿರುವ ನೇರ ವೆಚ್ಚಗಳಿಗೆ ಆದಾಯ ತೆರಿಗೆಯ ಸಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. 80 ಸಿ ಅಡಿಯಲ್ಲಿ ರೂ. 1.5 ಲಕ್ಷದ ವರೆಗೆ ವಿನಾಯಿತಿಗೆ ಅವಕಾಶವಿದೆ. ಆದರೆ ನೆನಪಿರಲಿ ಆಸ್ತಿ ಖರೀದಿಸಿದ ವರ್ಷದಲ್ಲೇ ಇದನ್ನು ಕ್ಲೇಮ್ ಮಾಡಬೇಕು. ನೀವು 21 ಜನವರಿ 2020 ರಲ್ಲಿ ಆಸ್ತಿ ಖರೀದಿಸಿ ಸ್ಟ್ಯಾಂಡ್ ಡ್ಯೂಟಿ ಇತ್ಯಾದಿಗಳನ್ನು ಪಾವತಿಸಿ ರುವುದರಿಂದ ಹಣಕಾಸು ವರ್ಷ 2019-20 ನೇ ಸಾಲಿನಲ್ಲೇ ನೀವು ಈ ಕ್ಲೇಮ್ ಪಡೆದುಕೊಳ್ಳಬೇಕು, ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರು ಮತ್ತು ಹಿಂದೂ ಅವಿಭಕ್ತ ಕುಟುಂಬದಲ್ಲಿರುವ (ಎಚ್ ಯುಎಫ್) ಆದಾಯ ತೆರಿಗೆ ಪಾವತಿದಾರರು ಕೂಡ ಈ ವಿನಾಯಿತಿ ಪಡೆಯಬಹುದು.
| ಸಂಜಯ್ ಶಿವಪುರ
ಸಂಜಯ್ ಅವರೆ ಪ್ರಧಾನಮಂತ್ರಿ ಆವಾಜ್ ಯೋಜನೆ ಬಗ್ಗೆ ರಾಜ್ಯದ ವಿವಿಧ ಭಾಗಗಳಿಂದ ಸಾಕಷ್ಟು ಜನರು ಪ್ರಶ್ನೆ ಕೇಳುತ್ತಿದ್ದಾರೆ. ಅವರೆಲ್ಲರಿಗೂ ಮಾಹಿತಿ ಒದಗಿಸಿ ಗೊಂದಲ ಪರಿಹರಿಸುವ ಜತೆಗೆ ನಿಮ್ಮ ಪ್ರಶ್ನೆಗೂ ಸೂಕ್ತ ಉತ್ತರ ಸಿಗುವಂತಹ ಮಾಹಿತಿಯನ್ನು ಇಲ್ಲಿ ಒದಗಿಸಿದ್ದೇನೆ. ನಿಮ್ಮ ಪ್ರಶ್ನೆ ಪರಿಪೂರ್ಣವಾಗಿರದ ಕಾರಣ ಈ ಮಾಹಿತಿ ಆಧರಿಸಿ ನೀವು ಯಾವ ವರ್ಗದ ಯೋಜನೆಗೆ ಒಳಪಡುತ್ತೀರಾ ಎಂದು ತೀರ್ಮಾನಿಸಿ ಬ್ಯಾಂಕ್ ನವರಲ್ಲಿ ಮಾಹಿತಿ ಕೇಳಬಹುದು. ಒಟ್ಟು ನಾಲ್ಕು ವಿಭಾಗಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ವಿಂಗಡಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗ(ಇಡಬ್ಲ್ಯುಎಸ್- ವರ್ಗ1) , ಕಡಿಮೆ ಆದಾಯವಿರುವ ವರ್ಗ(ಎಲ್ಐಸಿ), ಮಧ್ಯಮ ಆದಾಯ ಗುಂಪು- 1 (ಎಂಐಜಿ -1), ಮತ್ತು ಮಧ್ಯಮ ಆದಾಯ ಗುಂಪು 2(ಎಂಐಜಿ-2) . ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯುಎಸ್- ವರ್ಗ1) ಮತ್ತು ಕಡಿಮೆ ಆದಾಯವಿರುವ (ಎಲ್ಐಸಿ) ವರ್ಗಕ್ಕೆ 2015 ರ ಜೂನ್ ನಿಂದಲೇ ಈ ಯೋಜನೆ ಜಾರಿಯಲ್ಲಿದೆ. ಮಧ್ಯಮ ಆದಾಯ ಗುಂಪು- 1 (ಎಂಐಜಿ -1), ಮತ್ತು ಮಧ್ಯಮ ಆದಾಯ ಗುಂಪು 2(ಎಂಐಜಿ-2) ಅನ್ನು 2017 , ಜನವರಿ 1 ರಿಂದ ಅನ್ವಯವಾಗುವಂತೆ ಯೋಜನೆಗೆ ಸೇರಿಸಲಾಗಿದೆ. (ಪಟ್ಟಿ ಗಮನಿಸಿ)
ಬೆಂಗಳೂರಿನಲ್ಲಿ ಕಾರ್ಯಾಗಾರ
ಇಂಡಿಯನ್ ಮನಿ ಡಾಟ್ ಕಾಂ ಸಿಇಒ ಸಿ ಎಸ್ ಸುಧೀರ್ ಸಾರಥ್ಯದಲ್ಲಿ ಒಂದು ದಿನದ ಫೈನಾನ್ಶಿಯಲ್ ಫ್ರೀಡಂ ಕಾರ್ಯಾಗಾರ ಮಾರ್ಚ್ 1 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಕಾರ್ಯಾಗಾರದಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ, ಹೂಡಿಕೆ, ತೆರಿಗೆ ನಿರ್ವಹಣೆ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಛಿಸುವವರು 8655097256 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ.