

ನನ್ನ ಮಗನಿಗೆ 24 ವರ್ಷ. ಎಂಬಿಎ ಪದವೀಧರನಾಗಿದ್ದು, ಪ್ರತಿ ತಿಂಗಳು 30 ಸಾವಿರ ರೂ. ಸಂಬಳ ಬರುತ್ತದೆ. ಮ್ಯೂಚವಲ್ ಫಂಡ್ ಎಸ್ಐಪಿ (ವ್ಯವಸ್ಥಿತ ಹೂಡಿಕೆ ಯೋಜನೆ)ಯಲ್ಲಿ ಪ್ರತಿ ತಿಂಗಳು 4 ಸಾವಿರ ರೂ. ಹೂಡಿಕೆ ಮಾಡಬೇಕೆಂದು ಆತ ಬಯಸಿದ್ದಾನೆ. ಆದರೆ ನಾನು ಇತ್ತೀಚೆಗೆ ಇನ್ಶೂರೆನ್ಸ್ ಕಂಪನಿಯೊಂದು ಬಿಡುಗಡೆ ಮಾಡಿರುವ ಎಸ್ಐಐಪಿ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡಿದ್ದೇನೆ. ಯಾವುದು ಸರಿಯಾದ ನಿರ್ಧಾರ?
| ಪ್ರಸನ್ನ ಎಸ್.ಜಿ.ಎಸ್., ತುಮಕೂರು
ಇನ್ಶೂರೆನ್ಸ್ ಕಂಪನಿಯೊಂದು ನನ್ನ ದೂರಿಗೆ ಸಂಬಂಧಪಟ್ಟಂತೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ದೂರು ನೀಡಿ ಸಮಸ್ಯೆ ಪರಿಹರಿಸಿಕೊಳ್ಳುವುದು ಹೇಗೆ?
| ಪ್ರವೀಣ್ ಚಿದಾನಂದ್ ಬಾಗಲಕೋಟೆ
ಇನ್ಶೂರೆನ್ಸ್ ಕಂಪನಿ ಸರಿಯಾದ ಸೇವೆ ಒದಗಿಸುತ್ತಿಲ್ಲ. ಕ್ಲೇಮ್ ಸೆಟಲ್ಮೆಂಟ್ ಮಾಡಲು ನಿರಾಕರಣೆ ಸೇರಿ ಇನ್ಶೂರೆನ್ಸ್ ಗೆ ಸಂಬಂಧಪಟ್ಟ ಸಮಸ್ಯೆಗಳಿದ್ದಲ್ಲಿ ನೀವು ದೂರು ನೀಡಲು ಹಲವು ಮಾರ್ಗಗಳಿವೆ. ಜೀವ ವಿಮೆ( ಲೈಫ್ ಇನ್ಶೂರೆನ್ಸ್) ಕಂಪನಿಗಳಾಗಲಿ ಅಥವಾ ಸಾಮಾನ್ಯ ( ಜನರಲ್ ) ಇನ್ಶೂರೆನ್ಸ್ ಕಂಪನಿಗಳಾಗಲಿ ದೂರು ನೀಡಲು ಅವಕಾಶವಿದೆ. ಇನ್ಶೂರೆನ್ಸ್ ಕಂಪನಿಯು ಸರಿಯಾದ ಸೇವೆ ಒದಗಿಸುತ್ತಿಲ್ಲ ಅಂತಾದರೆ ಆ ನಿರ್ದಿಷ್ಟ ಕಂಪನಿಯ ದೂರು ಪರಿಹಾರ ಅಧಿಕಾರಿಗಳನ್ನು( ಗ್ರಿವೆನ್ಸ್ ರಿಡ್ರೆಸ್ಸಲ್ ಆಫೀಸರ್ಸ್) ಸಂರ್ಪಸಬಹುದು. ಅವರಿಗೆ ಲಿಖಿತ ದೂರು ನೀಡಿ, ಪೂರಕ ದಾಖಲೆ ಪೂರೈಸಿ, ದೂರು ನೀಡಿದ ಬಗ್ಗೆ ಅವರಿಂದ ಹಿಂಬರಹ ಪಡೆದುಕೊಳ್ಳಬೇಕು. ಇಂತಹ ದೂರಿಗೆ 15 ದಿನಗಳ ಒಳಗಾಗಿ ಕಂಪನಿ ಉತ್ತರಿಸಬೇಕಾಗುತ್ತದೆ. ಕಂಪನಿಯು ದೂರಿಗೆ ಸ್ಪಂದಿಸಿದಿದ್ದರೆ ಅಥವಾ ಸರಿಯಾದ ಉತ್ತರ ನೀಡಲಿಲ್ಲ ಎಂದೆನಿಸಿದರೆ ಐಆರ್ಡಿಎ, ಅಂದರೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಗ್ರಾಹಕ ವಿಭಾಗಕ್ಕೆ ದೂರು ಸಲ್ಲಿಸಬಹುದು. ದೂರು ನೀಡಲು ನಿಮಗಿರುವ ಆಯ್ಕೆಗಳು: ವಿವರವಾಗಿ ದೂರು ಬರೆದು ಇ- ಮೇಲ್ ವಿಳಾಸ complaintsirda.gov.inಗೆ ರವಾನಿಸಬಹುದು. ಐಆರ್ಡಿಎ ವೆಬ್ಸೈಟ್ನಲ್ಲಿನ ದೂರುಗಳ ವಿಭಾಗಕ್ಕೆ ಹೋಗಿ ದೂರು ಅರ್ಜಿಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ ಅಪ್ಲೋಡ್ ಮಾಡಬಹುದು. ಟೋಲ್ ಫ್ರೀ ನಂಬರ್ 18004254732ಗೆ ಕರೆ ಮಾಡಿ ಕನ್ನಡ, ಇಂಗ್ಲಿಷ್, ಹಿಂದಿ ಅಥವಾ ಇನ್ನಿತರ ಪ್ರಾದೇಶಕ ಭಾಷೆಗಳಲ್ಲಿ ದೂರು ದಾಖಲಿಸಬಹುದು. ಐಆರ್ಡಿಎನ ಸಮಗ್ರ ದೂರು ನಿರ್ವಹಣಾ ವ್ಯವಸ್ಥೆ (ಐಜಿಎಂಎಸ್)ಯನ್ನು ಬಳಸಿ ದೂರು ನೀಡಲು igms.irda.gov.inಗೆ ಲಾಗಿನ್ ಆಗಬೇಕು. ಲಾಗಿನ್ ಬಳಿಕ, ಮಾಹಿತಿ ಭರ್ತಿ ಮಾಡಿದಾಗ ಟೋಕನ್ ನಂಬರ್ ಲಭ್ಯವಾಗುತ್ತದೆ. ಅದರಿಂದ ದೂರಿನ ಸ್ಥಿತಿಗತಿ ಅರಿಯಲು ಸಾಧ್ಯ. ನಂತರದಲ್ಲೂ ನಿಮಗೆ ನ್ಯಾಯ ದೊರಕಿಲ್ಲ ಎನಿಸಿದಲ್ಲಿ ಇನ್ಶೂರೆನ್ಸ್ ಒಂಬುಡ್ಸ್ಮನ್ ಅಥವಾ ಸಿವಿಲ್ ನ್ಯಾಯಾಲಯಕ್ಕೆ ದಾವೆ ಸಲ್ಲಿಸಬಹುದು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದೇನೆಂದು ಸಿಬಿಲ್ ರಿಪೋರ್ಟ್ ಮಾಹಿತಿಯಲ್ಲಿದೆ. ಆದರೆ, ಅಸಲಿಗೆ ಆ ಸಾಲ ನನಗೆ ಸಂಬಂಧಿಸಿದ್ದೇ ಅಲ್ಲ. ಈ ತಪ್ಪನ್ನು ಸರಿಪಡಿಸುವುದು ಹೇಗೆ?
| ಶಾಸ್ತ್ರಿ ಚಾಮರಾಜನಗರ
ಮೊದಲಿಗೆ ಕ್ರೆಡಿಟ್ ರಿಪೋರ್ಟ್ನಲ್ಲಿ ಯಾವ ತಪ್ಪಿದೆ ಎನ್ನುವ ಮಾಹಿತಿಯನ್ನು ಭರ್ತಿ ಮಾಡಿ ಸಿಬಿಲ್ (ಇಐಆಐಔ) ನ ಆನ್ಲೈನ್ ವ್ಯಾಜ್ಯ ಪರಿಹಾರ ವೇದಿಕೆಗೆ ದೂರು ಸಲ್ಲಿಸಬೇಕು. ಆನ್ಲೈನ್ನಲ್ಲಿ ದೂರು ಸಲ್ಲಿಸಿದ ಕೂಡಲೇ ನಿಮಗೆ ವ್ಯಾಜ್ಯ ಪರಿಹಾರ ವೇದಿಕೆಯ ಕಂಪ್ಲೇಂಟ್ ಐಡಿ ನಂಬರ್ ಸಿಗುತ್ತದೆ. ಸಿಬಿಲ್ ನಿಮ್ಮ ಅರ್ಜಿಯನ್ನು ಬ್ಯಾಂಕ್ಗೆ ಕಳುಹಿಸಿ ಲೋಪಗಳನ್ನು ಸರಿಪಡಿಸುವಂತೆ ಕೋರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 30 ದಿನ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಿಬಿಲ್ ಸಹಾಯವಾಣಿ - 02261404300 , 02266384600 ಕ್ಕೆ ಸಂಪರ್ಕಿಸಿ.
‘ಇಂಡಿಯನ್ ಮನಿ ಡಾಟ್ ಕಾಂ’ನ ಸಿಇಒ ಸಿ.ಎಸ್.ಸುಧೀರ್ ಸಾರಥ್ಯದಲ್ಲಿ ಫೈನಾನ್ಶಿಯಲ್ ಫ್ರೀಡಂ ಆಪ್ ಆರಂಭಿಸಲಾಗಿದೆ. ಹಣಕಾಸು ನಿರ್ವಹಣೆ, ಬಿಜಿನೆಸ್ ಆರಂಭಿಸುವುದು, ಕೃಷಿಯಲ್ಲಿ ಯಶಸ್ವಿಯಾಗುವುದು, ವೃತ್ತಿ ಜೀವನದಲ್ಲಿ ಯಶಸ್ವಿಯಾಗುವುದು ಸೇರಿ ಹತ್ತು ಹಲವು ಕೋರ್ಸ್ ಈ ಆಪ್ನಲ್ಲಿವೆ. ಕೂಡಲೇ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ನಿಂದ ಫೈನಾನ್ಶಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ.