ಹಣ ದುರುಪಯೋಗ ಆಗಿಲ್ಲ

28.pyp.01 (1)
Published on

ಪಿರಿಯಾಪಟ್ಟಣ: ತಾಲೂಕಿನ ದೊಡ್ಡಬೇಲಾಳು ಪಿಎಸಿಸಿಎಸ್‌ನಲ್ಲಿ ನಾನು ಯಾವುದೇ ಹಣ ದುರುಪಯೋಗ ಮಾಡಿಕೊಂಡಿಲ್ಲ. ಸಂಘದ ಅಧ್ಯಕ್ಷ ಮತ್ತು ಕೆಲ ನಿರ್ದೇಶಕರು ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಸಂಘದ ಸಿಇಒ ರಮೇಶ್ ಸ್ಪಷ್ಪಪಡಿಸಿದರು.

80 ಲಕ್ಷ ರೂ. ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ನನ್ನ ವಿರುದ್ಧ ಸಂಘದ ಅಧ್ಯಕ್ಷ ಶಿವಣ್ಣ ಹಾಗೂ ಕೆಲ ನಿರ್ದೇಶಕರು ಆಪಾದಿಸುವ ಮೂಲಕ ನನ್ನ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಂಘದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಸಿಇಒ ಸ್ಥಾನದಿಂದ ನನ್ನನ್ನು ಅಮಾನತುಪಡಿಸಿರುವುದಾಗಿ ಹೇಳಿಕೆಗಳನ್ನು ನೀಡುತ್ತಿರುವುದು ಕಾನೂನುಬಾಹಿರ ಹಾಗೂ ಏಕಪಕ್ಷೀಯ ನಿರ್ಧಾರವಾಗಿದ್ದು, ಅವರು ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಸತ್ಯಕ್ಕೆ ದೂರ ಎಂದರು.
ಈಗಾಗಲೇ ಸಂಘದ 2017 -18ನೇ ಸಾಲಿನ ಆಡಿಟ್ ವರದಿ ಬಂದಿದ್ದು, ಇದರಲ್ಲಿ ಹಣ ದುರುಪಯೋಗವಾಗಿರುವ ಬಗ್ಗೆ ದೂರು ಬಂದಿಲ್ಲ. ಅನುಮಾನವಿದ್ದರೆ ಆಡಿಟ್ ವರದಿಯನ್ನು ತನಿಖೆ ಮಾಡಿಸಿ ನಾನು ತಪ್ಪಿತಸ್ಥನೆಂದು ಕಂಡು ಬಂದಲ್ಲಿ ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.

ಗ್ರಾಮದ ಮುಖಂಡ ಡಿ.ಟಿ ಸತೀಶ್, ಮಾಜಿ ಅಧ್ಯಕ್ಷ ರಮೇಶ್, ನಿರ್ದೇಶಕರಾದ ರಾಮ ಭೋವಿ, ಜಗದೀಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net