ದಾಂಪತ್ಯದಲ್ಲಿ ಬಿರುಕು ಮೂಡಲು ಹಣ, ಲೈಂಗಿಕತೆಯೇ ಕಾರಣವಲ್ಲ.. ಈ 3 ನಡುವಳಿಕೆಗಳಿಂದಲೂ ಮುರಿಯಬಹುದು | BreakUp

dk-2025-03-05t190638978-67c85371a0197
Published on

BreakUp:ದಾಂಪತ್ಯದಲ್ಲಿ ದೊಡ್ಡ ಸಮಸ್ಯೆಗಳು ಹಣದ ಕೊರತೆ ಮತ್ತು ಲೈಂಗಿಕತೆಯಿಂದ ಉದ್ಭವಿಸುತ್ತವೆ ಎಂದು ಹೇಳಲಾಗುತ್ತದೆ. ಆದರೆ, ಈ ಜೀವಮಾನದ ಸಂಬಂಧವನ್ನು ಬಲಪಡಿಸಲು ಅಥವಾ ಮುರಿಯಲು ಇವು ಮಾತ್ರ ಕಾರಣವಲ್ಲ.

ಹೌದು, ಕೆಲವೊಮ್ಮೆ ಆನಾರೋಗ್ಯಕಾರ ಸಂವಹನ, ವರ್ತನೆ ಮತ್ತು ಅಪನಂಬಿಕೆಯತಂಜ ಸಂಗತಿಗಳು ಕೂಡ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುತ್ತದೆ. ಹಾಗಾಗಿ, ಆರೋಗ್ಯಕಾರ ಸಂಬಂಧ ಸಂತೋಷದ ಪ್ರಣಯವನ್ನು ಕಾಪಾಡಿಕೊಳ್ಳಲು ಸಂಘರ್ಷಕ್ಕೆ ಮತ್ತು ವಿಚ್ಛೇದನಕ್ಕೆ ಕಾರಣವಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ಗುರುತಿಸುವುದು ಮುಖವಾಗಿದೆ.

ಪ್ರತಿಯೊಬ್ಬರ ಜೀವನದಲ್ಲಿ ಒಬ್ಬ ವ್ಯಕ್ತಿಯೂ ಕೆಲವೊಮ್ಮೆ ತನ್ನ ಸ್ವಂತ ಅಭ್ಯಾಸಗಳಿಂದ ದಾಂಪತ್ಯ ಜೀವನದಲ್ಲಿ ಕಾರಣನಾಗುತ್ತನೆ. ಅಂತಹ ಪರಿಸ್ಥಿತಿಯಲ್ಲಿ ಸಂಬಂಧದ ಬಿರುಕಿಕೆ ಕಾರಣವಾಗುವ ಕೆಲ ಅಭ್ಯಾಸಗಳನ್ನು ನಾವು ನಿಮಗೆ ಹೇಳುತ್ತಿದ್ದು, ಅವುಗಳನ್ನು ಪಾರು ಮಾಡುಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ..

1. ಕೆಟ್ಟ ಸಂವಹನ(ಕೆಟ್ಟದಾಗಿ ಮಾತನಾಡುವುದು)

ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಂವಹನ ಅಂತರವಿದ್ದರೆ ಅಥವಾ ನೀವು ಪರಸ್ಪರ ಸರಿಯಾಗಿ ಮಾತನಾಡದಿದ್ದರೆ ಈ ವಿಧಾನವು ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ಈ ಪರಿಸ್ಥಿತಿಯು ಪರಸ್ಪರರ ಮೇಲಿನ ಪ್ರೀತಿಯ ಭಾವನೆಯನ್ನು ನಿರಂತರವಾಗಿ ಕುಗ್ಗಿಸಬಹುದು.

2.ಹೊರಗಿನವರ ಹಸ್ತಕ್ಷೇಪ

ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬ ನಾನ್ಣುಡಿಯಂತೆ ನಮ್ಮ ಸಮಾಜದಲ್ಲಿ ವೈವಾಹಿಕ ದಂಪತಿಗಳು ಸೇರಿದಂತೆ ಇತರೆ ಪ್ರತಿ ವಿಷಯದಲ್ಲಿ ಮೂರನೇ ವ್ಯಕ್ತಿ ಕಡ್ಡಿ ಆಳಡಿಸುದರಿಂದಲೇ ಅನೇಕ ಸಂಬಂಧಗಳು ಮರಿದುಬಿದ್ದಿವೆ. ಹೀಗಾಗಿ, ನಮ್ಮ ಜೀವನದಲ್ಲಿ ಮೂರನೇ ವ್ಯಕ್ತಿಗೆ ಸ್ಥಾನ ನೀಡಬಾರದು.

3.ವಿಶ್ವಾಸದ ಕೊರತೆ

ಪ್ರತಿಯೊಂದು ಸಂಬಂಧಕ್ಕೂ ನಂಬಿಕೆಯೇ ಆಧಾರ. ಗಂಡನಿಗೆ ತನ್ನ ಹೆಂಡತಿಯ ಮೇಲೆ ಇರುವ ಅನುಮಾನ ಅಥವಾ ಹೆಂಡತಿಗೆ ತನ್ನ ಗಂಡನ ಮೇಲೆ ಇರುವ ಅನುಮಾನವು ಸಂಬಂಧದಲ್ಲಿ ದೀರ್ಘಕಾಲದವರೆಗೆ ಸಂಬಂಧದಲ್ಲಿ ಕಹಿಯನ್ನು ಉಂಟು ಮಾಡುತ್ತದೆ. ಹೀಗಾಗಿ, ಇಬ್ಬರ ನಡುವೆ ವಿಶ್ವಾಸದ ಕೊರತೆ ಇಲ್ಲವಾಗುವಂತೆ ನೋಡಿಕೊಳ್ಳುವುದು ಉತ್ತಮ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net