ದಿನಕ್ಕೊಂದು ಸೇಬು ತಿನ್ನೋದ್ರಿಂದ ವೈದ್ಯರನ್ನು ದೂರವಿಟ್ಟರೆ.. 30 ದಿನ ಕಿತ್ತಳೆ ತಿಂದ್ರೆ ಏನಾಗುತ್ತೆ..? |Oranges

dk-2025-03-05t172456448-67c83b9cbd285
Published on

Oranges: 'ದಿನಕ್ಕೊಂದು ಸೇಬು ತಿನ್ನೊದ್ರಿಂದ ವೈದ್ಯರು ದೂರ' ಎನ್ನುತ್ತಾರೆ ಹಿರಿಯರು. ಇದರರ್ಥ ದಿನಾಲು ಸೇಬು ತಿಂದರೆ ಆರೋಗ್ಯ ವೃದ್ಧಿಯಾಗುತ್ತದೆ. ಆದ್ದರಿಂದ ವೈದ್ಯರ ಬಳಿಯೇ ಹೋಗುವ ಅವಶ್ಯತೆ ಇಲ್ಲ ಎಂಬುವ ನುಡಿಗಟ್ಟಾಗಿದೆ. ಹಾಗೆಯೇ ಆರೆಂಜ್​(ಕಿತ್ತಳೆ) ದಿನಾ ತಿಂದರೆ ಏನೆಲ್ಲಾ ಲಾಭಗಳು ಗೊತ್ತಾ?. ಇದನ್ನು ನೀವು ತಿಳಿದರೆ ದಿನಾಲೂ ಬಿಡದೇ ಕಿತ್ತಳೆ ತಿನ್ನುವಿರಿ.

ಹೌದು, ಕಿತ್ತಳೆ ತಿನ್ನುವುದರಿಂದಾಗುವ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ನೀವು ಪ್ರತಿದಿನ ಒಂದು ಕಿತ್ತಳೆ ತಿಂದರೆ ಏನಾಗುತ್ತದೆ? ತಜ್ಞರ ಪ್ರಕಾರ, ಈ ಹಣ್ಣು ಆರೋಗ್ಯ ಪ್ರಯೋಜನಗಳ ನಿಧಿಯಾಗಿದೆ! ನೀವು ಪ್ರತಿದಿನ ಒಂದು ಕಿತ್ತಳೆಯನ್ನು 30 ದಿನಗಳವರೆಗೆ ತಿಂದರೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೊಟ್ಟೆಯ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಇದು ತೂಕ ಇಳಿಸಿಕೊಳ್ಳಲು ಸಹ ನಿಮಗೆ ಸಹಾಯ ಮಾಡುತ್ತದೆ.

ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ, ಅಮೈನೋ ಆಮ್ಲಗಳು, ಕ್ಯಾಲ್ಸಿಯಂ, ಅಯೋಡಿನ್, ರಂಜಕ, ಸೋಡಿಯಂ, ಖನಿಜಗಳು ಮತ್ತು ಫೈಬರ್ ಇರುತ್ತವೆ. ಪ್ರತಿದಿನ ಕಿತ್ತಳೆ ಸೇವನೆಯು ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಪೂರೈಸುವುದಲ್ಲದೆ, ವಿವಿಧ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ದಿನಾ ಕಿತ್ತಳೆ ತಿನ್ನುವುದರಿಂದಾಗುವ ಲಾಭಗಳು

1.ರೋಗ ನಿರೋಧಕ ಹೆಚ್ಚಳ

30 ದಿನಗಗಳ ಕಾಲ ಕಿತ್ತಳೆ ತಿಂದರೆ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಿಮಗೆ ಆಗಾಗೆ ಬರುವ ಶೀತ ಕೆಮ್ಮು, ವೈರಲ್​ ಸೋಂಕುಗಳು ಇತರೆ ಕಾಯಿಗಳಿಂದ ಬಳಲುತ್ತಿದ್ದಾರೆ ಪ್ರತಿದಿನ ಕಿತ್ತಾಳೆ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಳವಾಗಲಿದೆ.

2.ಜೀರ್ಣಕ್ರಿಯೆ ಸುಧಾರಣೆ

ಮಲಬದ್ಧತೆ, ಅಜೀರ್ಣ ಮತ್ತು ಆಮ್ಲೀಯ ಸಮಸ್ಯೆ ಇದ್ದರೆ ಕಿತ್ತಾಳೆ ತಿಂದರೆ ಸಹಕಾರಿಯಾಗಲಿದೆ. ಕಿತ್ತಳೆಯಲ್ಲಿರುವ ಫೈಬರ್ ಮತ್ತು ನೈಸರ್ಗಿಕ ಕಿಣ್ವಗಳು ಹೊಟ್ಟೆಯನ್ನು ಶುದ್ಧೀಕರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

3.ಚರ್ಮದ ಹೊಳಪು

ಕಿತ್ತಾಳೆ ಹಣ್ಣಿನ ನಿಯಮಿತ ಸೇವನೆಯಿಂದ ಚರ್ಮದ ಹೊಳಪು ಬರಲಿದೆ. ಅಲ್ಲದೆ, ಚರ್ಮದ ಸುಕ್ಕು ಕೂಡ ನಿವಾರಣೆಯಾಗಲು ಕಿತ್ತಳೆ ಸಹಾವಾಗಲಿದೆ. ಕಿತ್ತಳೆಯಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಒಳಗಿನಿಂದ ಪೋಷಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

4.ಕೊಲೆಸ್ಟ್ರಾಲ್​ ನಿಯಂತ್ರಣ

ನೀವು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಬಯಸಿದರೆ ನಿಮ್ಮ ದೈನಂದಿನ ಆಹಾರದಲ್ಲಿ ಕಿತ್ತಳೆ ಹಣ್ಣನ್ನು ಸೇರಿಸಿ. ಹೌದು, ಕಿತ್ತಳೆ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಮತ್ತು ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಿತ್ತಳೆ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡುತ್ತದೆ ಅಲ್ಲದೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net