ಉದುರಿದ ಕೂದಲಿನ ಬೆಳವಣಿಗೆ ಈ ಎಣ್ಣೆಯನ್ನು ಬಳಸಿ; ಅಡ್ಡಪರಿಣಾಮಗಳಿಲ್ಲದೆ ಫಲಿತಾಂಶ ಪಡೆಯಿರಿ! | Fallen Hair

dk-2025-03-05t134003417-67c806eba55f1
Published on

Fallen Hair ಈ ತಾಂತ್ರಿಕ ಯುಗದಲ್ಲಿ ಯುವಕರು, ವೃದ್ಧರು ಎನ್ನದೇ ಎಲ್ಲರಿಗೂ ಬೇಗನೆ ತೆಲೆ ಬಿಳಿ ಕೂದಲು ಬರುತ್ತಿದೆ. ಇದಾದರೂ ಒಕೆ ಎನ್ನುತ್ತಾರೆ ಇಂದಿನ ಜನರು. ಆದರೆ, ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರಿ ತೆಲೆ ಬೋಳಗುತ್ತದೆ. ಇದರಿಂದ ಸಣ್ಣ ವಯಸ್ಸಿನಿಂದಲೇ ಹಲವಾರು ಸಮಸ್ಯೆಗಳನ್ನು ಎದರಿಸಬೇಕಾಗುತ್ತದೆ. ಹೀಗಾಗಿ, ಕೂದಲು ಉದುರುವಿಕೆ ತಡೆಯಲು ಕೂದಲು ಬೆಳೆಯಲು ದಿನನಿತ್ಯ ನೂರಾರು ಎಣ್ಣೆ, ಔಷಧಿಗಳನ್ನು ಮತ್ತು ಅನೇಕ ಪ್ರಯೋಗಳನ್ನು ಮಾಡುತ್ತಾರೆ. ಆದರೆ ರಿಸಲ್ಟ್​​ ಮಾತ್ರ ಶೂನ್ಯ.

ಕೂದಲಿನ ಬೆಳವಣಿಗೆ ಹೆಚ್ಚಿಸಲು ಮತ್ತು ಬಲಪಡಿಸಲು ನೈಸರ್ಗಿಕ ಎಣ್ಣೆಯೊಂದನ್ನು ಬಳಕೆ ಮಾಡುವಂತೆ ವೈದ್ಯರೊಬ್ಬರು ಸಲಹೆ ನೀಡಿದ್ದಾರೆ.

ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ರೋಸ್ಮರಿ ಎಣ್ಣೆಯನ್ನು ಅತ್ಯುತ್ತಮ ನೈಸರ್ಗಿಕ ಪರಿಹಾರವೆಂದು ಪರಿಗಣಿಸಲಾಗಿದೆ. ಇದು ಕೂದಲಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಲಿದೆ. ಅಲ್ಲದೆ,ರೋಸ್ಮರಿ ಎಣ್ಣೆಯು ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ ಮತ್ತು ರಕ್ತ ಪರಿಚಲನೆ ಹೆಚ್ಚಿಸುವ ಗುಣಗಳನ್ನು ಹೊಂದಿದೆ, ಇದು ಕೂದಲಿನ ಬೇರುಗಳನ್ನು ಬಲಪಡಿಸಲು ಮತ್ತು ಕೂದಲಿನ ಬೆಳವಣಿಗೆ ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದ ಡಾ. ಕುನಾಲ್ ಸೂದ್ (MD) ಎಂಬ ವೈದ್ಯರು ಹೇಳಿದ್ದಾರೆ.

ಅಲ್ಲದೆ, ಈ ಕುರಿತು ತನ್ನ ಇನ್ಸ್ಟಾಗ್ರಾಮ್ನಲ್ಲಿ ಒಬ್ಬ ವ್ಯಕ್ತಿ ರೋಸ್ಮರಿ ಎಣ್ಣೆಯಿಂದ ಕೂದಲು ಬೆಳವಣಿಗೆಯ ಬಗ್ಗೆ ಮಾತನಾಡುವ ವೀಡಿಯೊವನ್ನು ಕೂಡ ಹಂಚಿಕೊಂಡಿದ್ದಾರೆ.

ವೈದ್ಯರು ಹೇಳಿದ್ದೇನು..?

ರೋಸ್ಮರಿ ಎಣ್ಣೆ ಬಳಕೆ ಹೊಸದೇನಲ್ಲ, ಅಲ್ಲದೆ, ಇದರ ಪ್ರಯೋಜನ ಅನೇಕ ವರ್ಷಗಳಿಂದಲೂ ಕೂಡ ಇದೆ. ಇದನ್ನೂ ಪ್ರಾಚೀನ ಕಾಲದಿಂದಲೂ ಕೂದಲು ಬೆಳವಣಿಗೆ ಬಳಸಲಾಗುತ್ತಿದೆ.

ನೀವು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ನೈಸರ್ಗಿಕ ಮಾರ್ಗವನ್ನು ಹುಡುಕುತ್ತಿದ್ದರೆ, ರೋಸ್ಮರಿ ಎಣ್ಣೆಯು ಉತ್ತಮ ಪರಿಹಾರವಾಗಿದೆ. ತಲೆನೋವು, ನಿದ್ರಾಹೀನತೆ ಮತ್ತು ಒತ್ತಡವನ್ನು ನಿವಾರಿಸಲು ಈ ಎಣ್ಣೆಯನ್ನು ಶತಮಾನಗಳ ಕಾಲದಿಂದಲೂ ಬಳಸುತ್ತಾರೆ ಎಂದಿದ್ದಾರೆ.

ಈ ಎಣ್ಣೆ ಬಳಸೊದೇಗೆ..?

ಡಾ. ಕುನಾಲ್ ಸೂದ್ ಹೇಳುವ ಪ್ರಕಾರ, ಇದು ನೈಸರ್ಗಿಕ ಎಣ್ಣೆಯಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ. ಈ ಎಣ್ಣೆಯನ್ನು ಬೇರೆ ಎಣ್ಣೆಯೊಂದಿಗೆ ಮತ್ತು ಶಾಂಪೀ ಜತೆ ಹಚ್ಚಬಹುದು ಎಂದು ಸಲಹೆ ನೀಡಿದ್ದಾರೆ. ನೆತ್ತಿಗೆ ಕೆಲ ಹನಿಗಳು ರೋಸ್ಮರಿ ಎಣ್ಣೆಯನ್ನು ಹಾಕಿ, ಕೆಲಹೊತ್ತು ಮಸಾಜ್​ ಮಾಡಬಬೇಕು. ಬಳಿಕ ಎರಡು ತಾಸು ಬಿಟ್ಟು ತೊಳೆಯಬೇಕು. ರಿಸಲ್ಟ್​ಗೆ ನಿಧಾನವಾಗಿ ಕಾಯಿರಿ. ಯಾಕೆಂದರೆ ಇದು ನೈಸರ್ಗಿಕ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net