

Monalisa Stunning ₹10 Crore Income: ಮಹಾಕುಂಭ ಮೇಳದಲ್ಲಿ ವೈರಲ್ ಹುಡುಗಿ ತನ್ನ ಆಕರ್ಷಕ ಸೌಂದರ್ಯ ಮತ್ತು ತೀಕ್ಷ್ಣವಾದ ವೈಶಿಷ್ಟ್ಯಗಳಿಂದ ಎಲ್ಲರ ಗಮನ ಸೆಳೆದ ಮೊನಾಲಿಸಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ. ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಮೊನಾಲಿಸಾ ಇದೀಗ ಈ ವ್ಯಾಪಾರವನ್ನು ಬಿಟ್ಟು ಕೇವಲ 10 ದಿನಗಳಲ್ಲಿ 10 ಕೋಟಿ ಗಳಿಸುತ್ತಿದ್ದಾರೆ.
ಮೊನಾಲಿಸಾ ಕ್ರೇಜ್ ಹೇಗಿತ್ತು ಅಂದ್ರೆ ಫ್ಯಾನ್ಸ್ ಮುತ್ತಿಕೊಳ್ಳುತ್ತಿದ್ದರು. ಸೆಲ್ಫಿಗಾಗಿ ಸುತ್ತುವರೆಯುತ್ತಿದ್ದರು. ಹಾಗಾಗಿಯೇ ಮೊನಾಲಿಸಾ ಅಪ್ಪ ಮಹಾಕುಂಭಮೇಳದ ಮಧ್ಯದಲ್ಲೇ ಊರಿಗೆ ಕಳುಹಿಸಿಬಿಟ್ಟರು. ಇದೀಗ ಈಕೆ ಹೊಸ ಬ್ಯುಸಿನೆಸ್ ಪ್ರಾರಂಭಿಸಿದ್ದಾಳೆ.
ಮಧ್ಯ ಪ್ರದೇಶದ ಇಂದೋರ್ನ ಮಹೇಶ್ವರ ಗ್ರಾಮದ ಹುಡುಗಿ ಮೊನಾಲಿಸಾ. ಮಹಾಕುಂಭಮೇಳದಲ್ಲಿ ದಿನಕ್ಕೆ ₹1000 ದಿಂದ ₹3000 ದುಡಿಯುತ್ತಿದ್ದಳು. ಆದ್ರೀಗ ಈಕೆಯ ರೇಂಜೇ ಚೇಂಜ್ ಆಗಿದೆ. ಹೊಸ ಬ್ಯುಸಿನೆಸ್ ಆರಂಭಿಸಿರೋ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾಳೆ.
ಮೊನಾಲಿಸಾ ಭೋಂಸ್ಲೆ 08 ಅನ್ನೋ ಯುಟ್ಯೂಬ್ ಚಾನಲ್ ಆರಂಭಿಸಿದ್ದಾಳೆ. ಜೇನುಗಣ್ಣಿನ ಈಕೆಯ ಪ್ರತೀ ವಿಡಿಯೋ ಮಿಲಿಯನ್ ವೀವ್ಸ್ ಪಡೆಯುತ್ತಿವೆ. ಇದುವರೆಗೂ ಕೇವಲ 9 ವಿಡಿಯೋ ವ್ಲಾಗ್ ಮಾಡಿರೋ ಮೊನಾಲಿಸಾ ಎಂಟೇ ದಿನಗಳಲ್ಲಿ ಸರಿ ಸುಮಾರು 3 ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿದ್ದಾಳೆ.
ರುದ್ರಾಕ್ಷಿ ಮಾರುತ್ತಿದ್ದಾಗ ದಿನಕ್ಕೆ ₹1000 ದುಡಿಯುತ್ತಿದ್ದ ಮೊನಾಲಿಸಾ ಇದೀಗ ಲಕ್ಷ.. ಕೋಟಿ ದುಡಿಯೋ ರೇಂಜ್ಗೆ ಬಂದಿದ್ದಾಳೆ ಎನ್ನಲಾಗುತ್ತಿದೆ.
ಮೊನಾಲಿಸಾ ಅವರ ಕಂದು ಕಣ್ಣುಗಳು ಮತ್ತು ಸರಳತೆಯು ಲಕ್ಷಾಂತರ ಮಹಾಕುಂಭ ಭಕ್ತರ ಹೃದಯವನ್ನು ಗೆದ್ದಿದೆ. ಅವಳ ಅನನ್ಯ ಸೌಂದರ್ಯವು ಅವಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂವೇದನೆಯನ್ನು ಮಾಡಿದೆ ಮತ್ತು ಜನರು ಅವಳ ಮತ್ತು ಅವಳ ಜೀವನದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.