

ನವದೆಹಲಿ: ಮಹಾಮಾರಿ ಕರೊನಾ ವೈರಸ್ನಿಂದಾಗಿ ಆರಂಭವಾಗಿರುವ ಆನ್ಲೈನ್ ಸಭೆ ಮತ್ತು ತರಗತಿಗಳ ಟ್ರೆಂಡ್ನಿಂದ ಒಂದಲ್ಲ ಒಂದು ಮುಜುಗರಪಡುವಂತಹ ಸನ್ನಿವೇಶಗಳು ಜರುಗುತ್ತಲೇ ಇವೆ. ಕ್ಯಾಮೆರಾ ಮುಂದೆ ಕುಳಿತು ಸಭೆ ಅಥವಾ ತರಗತಿಗಳಲ್ಲಿ ಭಾಗವಹಿಸುವಾಗ ಕೆಲವೊಮ್ಮೆ ಅಸಹ್ಯಕರ ಘಟನೆಗಳು ನಡೆದಿರುವುದು ಈಗಾಗಲೇ ವರದಿಯಾಗಿವೆ. ಇದೇ ರೀತಿಯ ಮತ್ತೊಂದು ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ಮಗ ಆನ್ಲೈನ್ ಕ್ಲಾಸ್ನಲ್ಲಿ ಬಿಜಿಯಾಗಿರುವಾಗ ತಾಯಿಯೊಬ್ಬಳು ಆಕಸ್ಮಿಕವಾಗಿ ಕ್ಯಾಮರಾ ಮುಂದೆ ಸಂಪೂರ್ಣ ಬೆತ್ತಲೆಯಾಗಿ ಓಡಾಡುವ ಮೂಲಕ ಮುಜುಗರ ಉಂಟುಮಾಡಿದ ಘಟನೆ ನಡೆದಿದೆ.
14 ಸೆಕೆಂಡ್ವುಳ್ಳ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ತೈವಾನ್ ಹೆಸರಿನ ಹುಡುಗ ಬೆರಳು ಮಾಡಿ ಏನೋ ತೊರಿಸುತ್ತಿರುವಂತೆ ಕಾಣುತ್ತದೆ. ಈ ವೇಳೆ ಆತನ ತಾಯಿ ಬೆತ್ತಲೆಯಾಗಿ ದಿಢೀರ್ ಪ್ರತ್ಯಕ್ಷವಾಗಿ ಕೋಣೆಯಲ್ಲಿ ಏನೋ ಹುಡುಕುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರ ಮಧ್ಯೆ ಶಿಕ್ಷಕಿ ಮಲಗಿರುವ ಹುಡುಗನನ್ನು ಎಚ್ಚರಿಸಲು ಪ್ರಯತ್ನಿಸುವಾಗ ಬೆತ್ತಲೆ ಮಹಿಳೆಯನ್ನು ನೋಡಿ ತೈವಾನ್ನನ್ನು ಕೂಗಿ ಕ್ಯಾಮೆರಾ ಆಫ್ ಮಾಡಲು ಸೂಚಿಸುತ್ತಾರೆ. ಇತ್ತ ತೈವಾನ್ ತಾಯಿಗೆ ಕ್ಯಾಮೆರಾ ಆನ್ನಲ್ಲಿರುವುದು ಅರ್ಥವಾಗಿ ತಕ್ಷಣ ಓಡಿ ಹೋಗುತ್ತಾರೆ. ಇದಿಷ್ಟು ದೃಶ್ಯದಲ್ಲಿ ರೆಕಾರ್ಡ್ ಆಗಿದೆ.
ಈ ವಿಡಿಯೋವನ್ನು ಯಂಗ್ ಸಿಂಬಾ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು ಭಾನುವಾರ ಶೇರ್ ಮಾಡಿಕೊಂಡಿದ್ದು, ಮೊದಲು ಈ ಜೂಮ್ ಕ್ಲಾಸ್ಗಳಿಗೆ ಅಂತ್ಯವಾಡಿ ಎಂದು ಬರೆದುಕೊಂಡಿದ್ದಾರೆ. ವಿಡಿಯೋವನ್ನು ಸುಮಾರು 5 ಮಿಲಿಯನ್ಗೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಆನ್ಲೈನ್ ಕ್ಲಾಸ್ಗಳಿಗೆ ಕೊನೆಯಾಡಿ ಎಂದು ಯಂಗ್ ಸಿಂಬಾರಿಗೆ ಧ್ವನಿಗೂಡಿಸಿದ್ದಾರೆ. ಇನ್ನು ಅನೇಕರು ತೈವಾನ್ ಮುಖ ಭಾವ ನೋಡಿ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಇನ್ನೊಂದು ದೃಶ್ಯದಲ್ಲಿ ಹುಡುಗನೊಬ್ಬ ಮಲಗಿರುವುದನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದರೆ, ಜಾಲತಾಣದಲ್ಲಿ ಮಾತ್ರ ಭಾರಿ ವೈರಲ್ ಆಗಿದ್ದು, ಚರ್ಚೆ ಹುಟ್ಟುಹಾಕಿದೆ. (ಏಜೆನ್ಸೀಸ್) (ವಿಡಿಯೋ ಕೃಪೆ: ಡೈಲಿ ಮೇಲ್)