ತೃತೀಯ ವಿಶ್ವಯುದ್ಧದ ಭೀತಿ

Mohan Baghwat
Published on

ಅಹಮದಾಬಾದ್: ಜಗತ್ತು ಮೂರನೇ ವಿಶ್ವ ಯುದ್ಧದ ಭೀತಿ ಎದುರಿಸುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಸಮಾಜದಲ್ಲಿ ಹಿಂಸಾಚಾರ, ಅತೃಪ್ತಿ ಹೆಚ್ಚುತ್ತಿದ್ದು ಜಗತ್ತು ತೃತೀಯ ಜಾಗತಿಕ ಯುದ್ಧದ ಹೊಸ್ತಿಲಲ್ಲಿ ನಿಂತಿದೆ. ಮಾನವರು ರೋಬೋಗಳಾಗುವುದನ್ನು ತಡೆಯಲು ಜಗತ್ತಿಗೆ ವಿವೇಕವನ್ನು ನೀಡುವ ಹೊಣೆ ಭಾರತದ ಮೇಲಿದೆ ಎಂದು ಕಾರ್ಯಕ್ರಮವೊಂದರಲ್ಲಿ ಅವರು ಪ್ರತಿಪಾದಿಸಿದರು.

ಜಗತ್ತು ತುಂಬಾ ಕಿರಿದಾಗಿದೆ ಎನ್ನುತ್ತೇವೆ. ಆದರೆ ಈ ಪ್ರಕ್ರಿಯೆಯಲ್ಲಿ ಎರಡು ವಿಶ್ವ ಸಮರಗಳು ನಡೆದಿವೆ. ಮೂರನೇ ವಿಶ್ವ ಸಮರ ಬೇರೆಯದೇ ಸ್ವರೂಪದಲ್ಲಿ ನಡೆಯುತ್ತದೆ. ಹಿಂಸಾಚಾರ ಮತ್ತು ಅತೃಪ್ತಿ ತಾಂಡವವಾಡುತ್ತಿದೆ. ಮಾಲಿಕರು, ಕಾರ್ವಿುಕರು, ಸರ್ಕಾರ, ಸಾರ್ವಜನಿಕರು, ಶಿಕ್ಷಕರು, ವಿದ್ಯಾರ್ಥಿಗಳು- ಹೀಗೆ ಪ್ರತಿಯೊಬ್ಬರೂ ಚಳವಳಿ ನಡೆಸುತ್ತಿದ್ದಾರೆ ಎಂದು ಭಾಗವತ್ ಹೇಳಿದರು. ಅಸಹಿಷ್ಣುತೆ, ಹಿಂಸಾಚಾರ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ.ಈ ಹಿಂದೆ ಇಲ್ಲದ ಸೌಕರ್ಯಗಳೆಲ್ಲವೂ ಈಗ ಲಭ್ಯವಾಗುತ್ತಿದೆ. ನೂರು ವರ್ಷಗಳ ಹಿಂದೆ ಕಲ್ಪಿಸಲೂ ಆಗದಷ್ಟು ಸಮೃದ್ಧತೆ ಈಗಿದೆ. ಹಾಗಿದ್ದರೂ ಜನರೂ ಅತೃಪ್ತಿಯಿಂದ ಬಳಲುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net