ಸಿಡಿ ಲೇಡಿಗೆ ಸಹಾಯ ಮಾಡಿದ್ದೇವೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಮಹಮದ್ ನಳಪಾಡ್

cd lady
Published on

ಬೆಂಗಳೂರು: ಸಿಡಿ ಲೇಡಿಗೆ ವಾಹನ ಸೌಲಭ್ಯ ಕಲ್ಪಿಸಿದ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮಹಮದ್ ನಳಪಾಡ್ ಸ್ಪಷ್ಟನೆ ನೀಡಿದ್ದು, ಕಷ್ಟದಲ್ಲಿರುವ ಮಹಿಳೆಗೆ ಸಹಾಯ ಮಾಡುವುದು ನನ್ನ ನೈತಿಕ ಜವಾಬ್ದಾರಿ. ಇನ್ನು ಮುಂದೆಯೂ ಸಹಾಯ ಮಾಡುತ್ತೇನೆ ಎಂದಿದ್ದಾರೆ.

ಆಕೆಗೆ ಸಹಾಯ ಮಾಡಲು ಕೊರ್ಟ್ ಬಳಿ ಬಂದಿದ್ದೆವು. ವಾಹನ ವ್ಯವಸ್ಥೆ ಮಾಡಿದ್ದರಲ್ಲಿ ಯಾವುದೆ ತಪ್ಪೂಇಲ್ಲ. ಯಾವುದೇ ಉದ್ದೇಶವೂ ಇಲ್ಲ. ನನಗೂ ಯುವತಿಗೂ ಯಾವುದೇ ಸಂಬಂಧವೂ ಇಲ್ಲ ಎಂದು ಅವರು ಹೇಳಿದ್ದಾರೆ.

ಬುಧವಾರ ನಾನು, ನನ್ನ ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹಿಳಾ ಕಾಂಗ್ರೆಸ್ ಸದಸ್ಯರು ಕೋರ್ಟ್ ಬಳಿ ಬಂದಿದ್ದೆವು. ಯುವತಿಗೆ ಸುರಕ್ಷತೆ ಬೇಕೆನ್ನುವುದು ನಮ್ಮೆಲ್ಲರ ಒತ್ತಾಯವಾಗಿತ್ತು. ವಿಶೇಷ ಕೋರ್ಟ್ ಬಳಿ ಬಂದ ಸಂದರ್ಭದಲ್ಲಿ ಆಕೆಯ ಲಾಯರ್ ಬಂದು ನಮಗೆ ಹೋಗಿಬರಲು ವಾಹನ ಬೇಕು ಎಂದು ಕೋರಿದರು. ನನ್ನ ಸ್ನೇಹಿತನ ಗಾಡಿ ಹಾಗೂ ಚಾಲಕನನ್ನು ಹೋಗಿ ಬನ್ನಿ ಎಂದು ನಾನೇ ಕಳಿಸಿದ್ದೆ ಎಂದು ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net