ವಿಶ್ವಸಂಸ್ಥೆ ಸಭೆಯಲ್ಲಿಂದು ಮೋದಿ ಏನು ಮಾತನಾಡುತ್ತಾರೆ?

Modi
Published on

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುಎನ್​ ಜನರಲ್​ ಅಸೆಂಬ್ಲಿಯಲ್ಲಿ ಮಾತನಾಡಲಿದ್ದು, ಅವರು ಯಾವ ವಿಷಯದ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎಂಬ ಬಗ್ಗೆ ಈಗಾಗಲೇ ಭಾರಿ ಕುತೂಹಲ ಮೂಡಿದೆ.

ಜಾಗತಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸುಸ್ಥಿರ ಅಭಿವೃದ್ಧಿ, ಜಾಗತಿಕ ಹವಾಮಾಣ ಬದಲಾವಣೆ, ಭಯೋತ್ಪಾದನೆ ಮುಂತಾದ ವಿಷಯಗಳನ್ನು ಅವರು ತಮ್ಮ ಮಾತುಗಳಲ್ಲಿ ಪ್ರಧಾನವಾಗಿ ಉಲ್ಲೇಖಿಸಲಿದ್ದಾರೆ ಎನ್ನಲಾಗಿದೆ. ಕೋವಿಡ್​-19 ಪಿಡುಗು ಹಿನ್ನೆಲೆಯಲ್ಲಿ ಈ ವರ್ಷ ಯುಎನ್​ ಜನರಲ್ ಅಸೆಂಬ್ಲಿ ವರ್ಚುವಲ್​ ಆಗಿ ನಡೆಯಲಿದೆ. ಬಹುತೇಕ ಎಲ್ಲ ಜಾಗತಿಕ ನಾಯಕರು ತಮ್ಮ ಮಾತುಗಳನ್ನು ಪೂರ್ವಮುದ್ರಿತ ವಿಡಿಯೋ ಫಾರ್ಮ್ಯಾಟ್​ ಮೂಲಕ ಮಂಡಿಸಲಿದ್ದಾರೆ.

ಯುನ್​ ಜನರಲ್​ ಅಸೆಂಬ್ಲಿಯಲ್ಲಿ ಮಾತನಾಡುವ ಬಗ್ಗೆ ಖುದ್ದು ಪ್ರಧಾನಿಯವರೇ ಟ್ವಿಟರ್ ಮೂಲಕ ಹೇಳಿಕೊಂಡಿದ್ದು, ಅವರ ಮಾತುಗಳು ಭಾರತೀಯ ಕಾಲಮಾನದಲ್ಲಿ ಇಂದು ಸಂಜೆ 6.30ರ ಸುಮಾರಿಗೆ ಪ್ರಸಾರವಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net