ಮೋದಿ-ಸ್ಟಾರ್ಮರ್​ ಭೇಟಿ: ಯುಕೆ-ಭಾರತ ಸಂಬಂಧಕ್ಕೆ ಹೊಸ ಶಕ್ತಿ ಬಂದಿದೆ ಎಂದ ಪ್ರಧಾನಿ| Modi-Starmer Meeting

Modi-Starmer Meeting
Published on

Modi-Starmer Meeting: ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್​ರೊಂದಿಗಿನ ಉನ್ನತ ಮಟ್ಟದ ಮಾತುಕತೆಗಳ ನಂತರ ಭಾರತ-ಯುಕೆ ಸಂಬಂಧಗಳಲ್ಲಿ ಹೊಸ ಶಕ್ತಿ ಕಂಡುಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಸೆಪ್ಟೆಂಬರ್​,09) ಹೇಳಿದ್ದಾರೆ.

ಇಂಡೋ-ಯುಕೆ ಸಂಬಂಧಗಳ ಬಗ್ಗೆ ಮಾತನಾಡಿದ ಮೋದಿ, ಪ್ರಧಾನಿ ಸ್ಟಾರ್ಮರ್ ನಾಯಕತ್ವದಲ್ಲಿ, ಭಾರತ ಮತ್ತು ಯುಕೆ ಸಂಬಂಧಗಳು ಗಮನಾರ್ಹವಾಗಿ ಪ್ರಗತಿ ಕಾಣುತ್ತಿವೆ. ಈ ವರ್ಷದ ಜುಲೈನಲ್ಲಿ, ನಾನು ಯುಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾವು ಐತಿಹಾಸಿಕ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ (ಸಿಇಟಿಎ) ಸಹಿ ಹಾಕಿದ್ದೇವೆ ಎಂದು ಪ್ರಧಾನಿ ಮೋದಿ ಸ್ಟಾರ್ಮರ್ ಜೊತೆಗಿನ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಎರಡೂ ರಾಷ್ಟ್ರಗಳು ಸಹಿ ಹಾಕಿದ FTA ತ್ವರಿತ ಅನುಷ್ಠಾನಕ್ಕೆ ಯುಕೆ ನಾಯಕ ಒತ್ತಾಯಿಸಿದ್ದು, ಇಬ್ಬರೂ ನಾಯಕರು ಮುಂಬೈನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.

ಈ ವರ್ಷದ ಜುಲೈನಲ್ಲಿ ಉಭಯ ದೇಶಗಳ ನಡುವೆ ಸಹಿ ಹಾಕಲಾದ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ನಿಜವಾಗಿಯೂ ಮುಖ್ಯವಾಗಿದೆ. ಅಲ್ಲದೆ, ನಾವು ಯುರೋಪಿಯನ್ ಒಕ್ಕೂಟವನ್ನು ತೊರೆದ ನಂತರ ನಾವು ಮಾಡಿಕೊಂಡಿರುವ ಅತಿದೊಡ್ಡ ಒಪ್ಪಂದ ಇದಾಗಿದ್ದು. ಭಾರತ ಇದುವರೆಗೆ ಮಾಡಿಕೊಂಡಿರುವ ಅತಿದೊಡ್ಡ ಒಪ್ಪಂದವೂ ಆಗಿದೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಇದು ಅತ್ಯಂತ ಮುಖ್ಯವಾಗಿದೆ ಎಂದು ಯುಕೆ ಪ್ರಧಾನಿ ಸ್ಟಾರ್ಮರ್​ ಈ ಹಿಂದೆ ಅಭಿಪ್ರಾಯ ವ್ಯಕ್ತಪಡಿಸಿದ್ದರು.

2025ರ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿಯು ಯುಕೆ ಭೇಟಿಯ ಸಮಯದಲ್ಲಿ ಸಹಿ ಹಾಕಲಾದ ಯುಕೆ-ಭಾರತ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ), ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ವಾರ್ಷಿಕವಾಗಿ 25.5 ಬಿಲಿಯನ್ ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net