ಲಡ್ಡು ರಾಜಕೀಯದಿಂದ ಕಾಲ್ತುಳಿತ ಸಂಭವ; ಮೋದಿ ಭಜನೆ ಬಿಟ್ಟು ಭಕ್ತರ ಸೌಕರ್ಯಗಳತ್ತ ಗಮನಹರಿಸಿ: YCP ಮಾಜಿ ಸಚಿವ ಟೀಕೆ

dk (65) (1)
Published on

ತಿರುಪತಿ: ಸುಖಸುಮ್ಮನೆ ಟಿಡಿಪಿ ಮತ್ತು ಜನಸೇನಾ ನಾಯಕರು ಲಡ್ಡು(ಪ್ರಸಾದ) ರಾಜಕೀಯ ಕಾರಣದಿಂದ ಇದೀಗ ತಿರುಪತಿಯಲ್ಲಿ ಕಾಲ್ತುಳಿತ ಸಂಭವಿಸಿದೆ ಎಂದು ವೈಎಸ್​ಆರ್(YCP) ಕಾಂಗ್ರೆಸ್​ನ ನಾಯಕ ಮತ್ತು ಮಾಜಿ ಸಚಿವ ಗುಡಿವಾಡ ಅಮರ್​ನಾಥ್​ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ್ದಾರೆ. ಕಾಲ್ತುಳಿತ ಘಟನೆ ದುರದೃಷ್ಟಕರ, ಇದಕ್ಕೆ ಸರ್ಕಾರವೇ ನೇರ ಹೊಣೆ. ಪ್ರಕರಣದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ವೈಸಿಪಿ ಪಕ್ಷದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಟಿಡಿಪಿ ಮತ್ತು ಜನಸೇನಾ ನಾಯಕರು ಮಾಡಿದ್ದಾರೆ. ಪ್ರಸಾದದಲ್ಲಿ ಪ್ರಾಣಿಗಳ ಮಾಂಸದ ಕೊಬ್ಬು ಬಳಕೆ ಮಾಡಿದ್ದಾರೆ ಎಂದು ಆರೋಪಿ ದೇಶಾದ್ಯಂತ ಸುಖಸುಮ್ಮನೆ ಚರ್ಚೆ ಮಾಡಿವಂತೆ ಮಾಡಿದ್ದಾರೆ. ಇದರ ಫಲವಾಗಿ ಇದೀಗ ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ ಘಟನೆ ನಡೆದಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರು ಭಜನೆ ನಿಲ್ಲಿಸಿ ತಿರುಪತಿಯಲ್ಲಿ ಭಕ್ತರ ಸೌಲಭ್ಯಗಳತ್ತ ಗಮನ ಹರಿಸಿದ್ದರೆ ಇಷ್ಟೊಂದು ಜೀವಗಳು ಬಲಿಯಾಗುತ್ತಿರಲಿಲ್ಲ ಎಂದು ಅಮರನಾಥ ಕಿಡಿಕಾರಿದರು.

ಸನಾತನ ಧರ್ಮವನ್ನು ರಕ್ಷಿಸುವ ನಾಯಕ ಪವನ್ ಕಲ್ಯಾಣ್ ಈಗ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದರು. ಈ ಹಿಂದೆ ಸನಾತನ ಧರ್ಮ ದೀಕ್ಷೆ ಮಾಡಿದ್ದ ಪವನ್, ಈಗ ಏನು ದೀಕ್ಷೆ ಮಾಡುತ್ತಾರೋ ನೋಡೋಣ ಎಂದು ಟೀಕಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net