

ನಿರ್ಮಲಾ 7ನೇ ಬಜೆಟ್ನಲ್ಲಿ ನವಭಾರತ ದಿಕ್ಸೂಚಿ ರೈತರಿಗೆ ಡಿಜಿಟಲ್ ಬಲ ನಾರಿಶಕ್ತಿ ಇನ್ನಷ್ಟು ಸಬಲ ಉದ್ಯೋಗ, ಕೌಶಲಕ್ಕೆ ಒತ್ತು ಬಡವರಿಗೆ 3 ಕೋಟಿ ಮನೆ ವೇತನವರ್ಗಕ್ಕೂ ಮಣೆ ಕ್ಯಾನ್ಸರ್ ಔಷಧ ಅಗ್ಗ
ವಿಕಸಿತ ಭಾರತದ ಕನಸಿಗೆ ಭದ್ರ ಬುನಾದಿ ಹಾಕುವ ಕೇಂದ್ರ ಸರ್ಕಾರದ ಆಶಯವನ್ನು 2024-25ನೇ ಸಾಲಿನ ಕೇಂದ್ರ ಬಜೆಟ್ ನಿರೂಪಿಸಿದೆ. ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಸುಳಿವಿನಂತೆ ಭವಿಷ್ಯದ ಭಾರತಕ್ಕಾಗಿ ಉದ್ಯೋಗಾವಕಾಶ ಹೆಚ್ಚಿಸಿ, ಕೌಶಲಾಭಿವೃದ್ಧಿಗೆ ಬಜೆಟ್ನಲ್ಲಿ ಹೆಚ್ಚಿನ ಗಮನ ನೀಡಲಾಗಿದೆ. ಮಹಿಳೆ ಮಕ್ಕಳ ಕಲ್ಯಾಣ, ಅನ್ನದಾತರ ಬದುಕು ಹಸನುಗೊಳಿಸುವ ಜತೆಯಲ್ಲೇ ಮಧ್ಯಮ ವರ್ಗ, ಕೈಗಾರಿಕೆ, ಶಿಕ್ಷಣ ಕ್ಷೇತ್ರ ಒಳಗೊಂಡಂತೆ 9 ಆದ್ಯತಾ ಕ್ಷೇತ್ರಗಳನ್ನು ಗುರುತಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7ನೇ ಬಜೆಟ್ನಲ್ಲಿ ಹಲವು ಯೋಜನೆ, ಘೋಷಣೆ ಹೊರಡಿಸಿದ್ದಾರೆ. ನವೋದ್ಯೋಗಿಗಳಿಗೆ 1 ತಿಂಗಳು ಸರ್ಕಾರದಿಂದಲೇ ವೇತನ, ಇಂಟರ್ನ್ಶಿಪ್ಗೆ ಅವಕಾಶ ಕಲ್ಪಿಸಿ ಮಾಸಿಕ ಭತ್ಯೆ ನೀಡುವ ಮೂಲಕ ಯುವಜನತೆಗೆ ಉದ್ಯೋಗದ ಹಾದಿ ತೋರಲಾಗುತ್ತಿದೆ. ಮಹಿಳಾ ನೌಕರರಿಗೆ ಉಚಿತ ಹಾಸ್ಟೆಲ್, ಬಡವರಿಗೆ 3 ಕೋಟಿ ಮನೆ ನಿರ್ವಿುಸಿಕೊಡುವ ಹಾಗೂ ಮಧ್ಯಮ ವರ್ಗಕ್ಕೆ ತೆರಿಗೆ ಸಿಹಿ ನೀಡುವ ಬದ್ಧತೆಯನ್ನು ನಿರ್ಮಲಾ ಪ್ರದರ್ಶಿಸಿದ್ದಾರೆ. ಕ್ಯಾನ್ಸರ್ ಔಷಧಗಳ ತೆರಿಗೆ ರದ್ದು ಮಾಡುವ ಮೂಲಕ ವೈದ್ಯಕೀಯ ಚಿಕಿತ್ಸೆಯನ್ನು ಅಗ್ಗಗೊಳಿಸಿದ್ದಾರೆ. ಒಟ್ಟಾರೆ ಭರಪೂರ ಅಲ್ಲದಿದ್ದರೂ ಜನರ ಆದ್ಯ ಕೊರತೆಗಳ ಬರ ನೀಗಿಸುವ ಪ್ರಯತ್ನ ಬಜೆಟ್ನಲ್ಲಿದೆ. 32.07 ಲಕ್ಷ ಕೋಟಿ ರೂ. ಗಾತ್ರದ ಈ ಬಜೆಟ್ ಜನಪ್ರಿಯವಲ್ಲದಿದ್ದರೂ ಜನಪರ ಎನ್ನುವ ಅಭಿಪ್ರಾಯ ವಿಶ್ಲೇಷಕರದು.
ಅಗ್ಗ: ಚಿನ್ನ, ಬೆಳ್ಳಿ, ಪ್ಲಾಟಿನಂ, ತಾಮ್ರ . ಮೊಬೈಲ್ ಫೋನ್, ಚಾರ್ಜರ್, 3 ಕ್ಯಾನ್ಸರ್ ಚಿಕಿತ್ಸಾ ಔಷಧ , ಸೌರ ಫಲಕಗಳ ಬಿಡಿಭಾಗಗಳು , ವಿದ್ಯುತ್ ತಂತಿ, ಎಕ್ಸ್ ರೇ ಉಪಕರಣ, ವಿದೇಶಿ ಬಟ್ಟೆ, ಚಮೋತ್ಪನ್ನ, ಟಿವಿ, ಸ್ಟಾರ್ಟ್ ಅಪ್ ವ್ಯವಸ್ಥೆ-ಏಂಜೆಲ್ ಟ್ಯಾಕ್ಸ್ ರದ್ದು, ವೈದ್ಯಕೀಯ ಉಪಕರಣಗಳು ತುಟ್ಟಿ : ಮರು ಬಳಕೆ ಆಗದ ಪ್ಲಾಸ್ಟಿಕ್ ವಸ್ತುಗಳು, ಎಲ್ಲ ರೀತಿಯ ವಿದ್ಯುತ್ ಉಪಕರಣಗಳು, ಮೊಬೈಲ್ ಟವರ್ ಬಿಡಿ ಭಾಗಗಳು
. ಕೃಷಿ
. ಉದ್ಯೋಗ
. ಸಮಗ್ರ ಅಭಿವೃದ್ಧಿ
. ಉತ್ಪಾದನೆ, ಸೇವೆಗಳು
. ನಗರಾಭಿವೃದ್ಧಿ
. ಶಕ್ತಿ
. ಮೂಲಸೌಕರ್ಯ
. ನಾವೀನ್ಯತೆ, ಸಂಶೋಧನೆ
. ಮುಂದಿನ ಪೀಳಿಗೆಯ ಸುಧಾರಣಾ ಕ್ರಮಗಳು
ಕೇಂದ್ರ ಬಜೆಟ್ ದೇಶದ ಸರ್ವಾಂಗೀಣ ಏಳಿಗೆಗೆ ಅಕ್ಷಯಪಾತ್ರೆ ಆಗಿದೆ. ಮಧ್ಯಮ ವರ್ಗಕ್ಕೆ ಶಕ್ತಿ ನೀಡಲಿದೆ. ಭಾರತದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ. | ನರೇಂದ್ರ ಮೋದಿ ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರದ ಬಜೆಟ್ ‘ಕುರ್ಚಿ ಉಳಿಸಿ’ ಬಜೆಟ್ ಆಗಿದೆ. 2024ರ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಹಾಗೂ ಹಿಂದಿನ ಬಜೆಟ್ಗಳ ಕಾಪಿ ಪೇಸ್ಟ್ ಬಜೆಟ್ ಇದಾಗಿದೆ. | ರಾಹುಲ್ ಗಾಂಧಿ ಲೋಕಸಭೆ ವಿಪಕ್ಷ ನಾಯಕ