

ನವದೆಹಲಿ: ಭಾರತದಲ್ಲಿ ಕರೊನಾ ವೈರಸ್ನ ಎರಡನೇ ಅಲೆಯಲ್ಲಿ ಸಂಭವಿಸಿದ ಸಾವಿನ ಪ್ರಮಾಣ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಜಾಗತಿಕ ಅನುಮೋದನೆ (ಅಪ್ರೂವಲ್)ರೇಟಿಂಗ್ ಶೇ. 66ಕ್ಕೆ ಇಳಿಕೆಯಾಗಿದೆ. ಹಿಂದೆ ಈ ಪ್ರಮಾಣ ಶೇ. 75ರಷ್ಟಿತ್ತು. ಹಾಗಿದ್ದರೂ, ಅಮೆರಿಕ ಅಧ್ಯ ಜೋ ಬೈಡೆನ್, ರಷ್ಯಾದ ವ್ಲಾಡಿಮಿರ್ ಪುತಿನ್, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಮತ್ತು ಜರ್ಮನಿಯ ಏಂಜೆಲಾ ಮರ್ಕೆಲ್ ಸೇರಿ ವಿಶ್ವದ 13 ದೇಶಗಳ ನಾಯಕರಿಗಿಂತ ಪ್ರಧಾನಿ ಮೋದಿ ಮುಂದಿದ್ದಾರೆ ಎಂದು ಅಮೆರಿಕ ದತ್ತಾಂಶ ಗುಪ್ತಚರ ಸಂಸ್ಥೆ ನಡೆಸಿದ ಗ್ಲೋಬಲ್ ಲೀಡರ್ ಅಪೂವಲ್ ರೇಟಿಂಗ್ ಟ್ರಾ$್ಯಕರ್ ಸಮೀೆಯಲ್ಲಿ ವರದಿಯಾಗಿದೆ.
ಜಾನ್ಸನ್ಗೆ ಕಳಪೆ ಶ್ರೇಯಾಂಕ
2020ರಲ್ಲಿ ಕರೊನಾ ವೈರಾಣು ಸಮಸ್ಯೆ ಆರಂಭವಾದ ಬಳಿಕ ಮೇ ತಿಂಗಳಲ್ಲಿ ಪ್ರಧಾನಿ ಮೋದಿ ಅವರ ಒಪ್ಪಿಗೆ ಪ್ರಮಾಣ ಶೇ. 84ರಷ್ಟಿತ್ತು. ಈ ಬಾರಿಯ ಸಮೀೆಯಲ್ಲಿ ಶೇ. 28 ಜನರು ಮೋದಿ ನಾಯಕತ್ವವನ್ನು ತಿರಸ್ಕರಿಸಿದ್ದಾರೆ ಎಂದು ಸಮೀೆ ಹೇಳಿದೆ. ಜಾಗತಿಕ ಅನುಮೋದನೆ ರೇಟಿಂಗ್ನಲ್ಲಿ ಇಟಲಿ ಪ್ರಧಾನಿ ಮಾರಿಯೋ ಡ್ರಾಗಿ (ಶೇ. 65) ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಮೆಕ್ಸಿಕೋ ಅಧ್ಯ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (ಶೇ. 63), ಆಸ್ಟ್ರೆಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ (ಶೇ.54), ಜರ್ಮನಿ ಚಾನ್ಸ್ಲರ್ ಏಂಜೆಲಾ ಮರ್ಕೆಲ್ (ಶೇ.53), ಅಮೆರಿಕ ಅಧ್ಯ ಜೋ ಬೈಡೆನ್ ಶೇ. 53, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (ಶೇ.48) ಮತ್ತು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (ಶೇ. 44) ಇದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಕುಸಿದ ರೇಟಿಂಗ್
ಕರೊನಾ ವೈರಸ್ ಮಹಾಮಾರಿಯಿಂದಾಗಿ ವಿಶ್ವದಾದ್ಯಂತ ಸರ್ಕಾರಗಳು ಮತ್ತು ಆಡಳಿತ ನಾಯಕರು ಸಾರ್ವಜನಿಕ ಟೀಕೆಗೆ ಗುರಿಯಾಗಿದ್ದಾರೆ. ಜಪಾನ್ ಪ್ರಧಾನಿ ಸುಗಾ ಯೋಶಿಹಿದೆ ಮತ್ತು ಸ್ಪೇನ್ನ ಪ್ರಧಾನಿ ಪೆಡ್ರೋ ಸ್ಯಾಂಚೆಝ್ ನಾಯಕತ್ವವನ್ನು ಕ್ರಮವಾಗಿ ಶೇ. 60 ಮತ್ತು ಶೇ.59 ಮಂದಿ ತಿರಸ್ಕರಿಸಿದ್ದಾರೆ. ಅಂದರೆ ಸಮೀೆಯಲ್ಲಿ ಅವರಿಗೆ ಅತಿ ಹೆಚ್ಚು ಅಸಮ್ಮತಿ ರೇಟಿಂಗ್ ಬಂದಿದೆ.