ಅಮ್ಮ ಇಡ್ಲಿಗೆ ಮೋದಿ ಇಡ್ಲಿ ಸ್ಪರ್ಧೆ

Modi Idly
Published on

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾರ ಸ್ಮರಣಾರ್ಥ ಜನಪ್ರಿಯವಾಗಿರುವ ‘ಅಮ್ಮ ಇಡ್ಲಿ’ಗೆ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಇಡ್ಲಿ ಸ್ಪರ್ಧೆಯೊಡ್ಡಲು ಸಜ್ಜಾಗಿದೆ.

ರಾಜ್ಯ ಬಿಜೆಪಿ ಪ್ರಚಾರ ಘಟಕದ ಉಪಾಧ್ಯಕ್ಷ ಮಹೇಶ್ ಸೇಲಂ ಜಿಲ್ಲೆಯ ಹಲವು ಭಾಗಗಳಲ್ಲಿ ‘ಮೋದಿ ಇಡ್ಲಿ’ ಪೂರೈಸುವುದಾಗಿ ಪ್ರಚಾರ ನಡೆಸಿದ್ದಾರೆ. ಅಮ್ಮ ಇಡ್ಲಿಯನ್ನು ರೂಪಾಯಿಗೆ ಒಂದರಂತೆ ಮಾರಲಾಗುತ್ತಿದೆ. ಅದೇ ಮಾದರಿಯಲ್ಲಿ ಹತ್ತು ರೂಪಾಯಿಗೆ ನಾಲ್ಕು ‘ಮೋದಿ ಇಡ್ಲಿ’ ಮಾರುವ ಯೋಜನೆಯನ್ನು ಮಹೇಶ್ ರೂಪಿಸಿದ್ದಾರೆ.

ಉದ್ಯೋಗ, ಆಹಾರ ಮತ್ತಿತರ ಅಗತ್ಯಗಳಿಗಾಗಿ ನೂರಾರು ಜನರು ಪ್ರತಿನಿತ್ಯ ಪಕ್ಷದ ಕಚೇರಿಗೆ ಬರುತ್ತಾರೆ. ಸಬ್ಸಿಡಿ ದರದಲ್ಲಿ ಉತ್ತಮ ಆಹಾರ ಪೂರೈಸುವುದು ತಕ್ಷಣದ ಅಗತ್ಯವಾಗಿದೆ. ಅಮ್ಮ ಇಡ್ಲಿಗೆ ಪಡಿತರ ಅಕ್ಕಿ ಮತ್ತು ಬೇಳೆಯನ್ನು ಬಳಸಲಾಗುತ್ತದೆ. ಆದರೆ ತಾವು ಉತ್ತಮ ಅಕ್ಕಿ, ಬೇಳೆ ಬಳಸುವುದಾಗಿ ಮಹೇಶ್ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net