

Bharat Rice: ಕೇಂದ್ರ ಸರ್ಕಾರ ಬೆಂಗಳೂರಿನ ಜನತೆಗೆ ದೀಪಾವಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ ,ಕಾಳು ವಿತರಿಸಲು ಕ್ರಮ ಕೈಗೊಂಡಿದೆ.
ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ 55-60 ರೂ, ಗೋಧಿ ಹಿಟ್ಟು 45-50 ರೂ, ಕಡಲೆಬೇಳೆ 90-100 ರೂ, ಮತ್ತು ಹೆಸರುಬೇಳೆ 120-130 ರೂ, ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಜನತೆಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇಂದ್ರ ಗ್ರಾಹಕ ವ್ಯವಹಾರ ಮತ್ತು ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದಿಂದ ಬೆಂಗಳೂರಿನಲ್ಲಿ 34 ರೂ.ಗೆ ಅಕ್ಕಿ, 30 ರೂ.ಗೆ ಗೋಧಿ ಹಿಟ್ಟು, 70 ರೂ.ಗೆ ಕಡಲೆಬೇಳೆ ಮತ್ತು 107 ರೂ.ಗೆ ಹೆಸರುಬೇಳೆ ವಿತರಿಸಲಾಗುತ್ತಿದೆ.
ದಿನೇ ದಿನೇ ಬೆಲೆ ಏರಿಕೆ ಇಂದ ಬೇಸತ್ತ ಜನತೆಗೆ ದೀಪಾವಳಿ ಪ್ರಯುಕ್ತ ಕೇಂದ್ರ ಸರ್ಕಾರದಿಂದ ಬಂಫ್ರ ಆಫ್ರ ಸಿಕ್ಕಿದೆ. ಇಂದಿನಿಂದ ಎರಡನೇ ಹಂತದಲ್ಲಿ ಭಾರತ್ ಬ್ರಾಂಡ್ ಯೋಜನೆ ಪ್ರಾರಂಭವಾಗಿದ್ದು, ಕೈಗೆಟಕುವ ಬೆಲೆಯಲ್ಲಿ ಆಹಾರ ದೊರೆಯುತ್ತಿದೆ.ಈ ಯೋಜನೆಗೆ ದೆಹಲಿಯ ಕೃಷಿ ಭವನದಲ್ಲಿ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಿದರು.
ಕರ್ನಾಟಕದ ಹಲವೆಡೆ ಚುನಾವಣೆಗೂ ಮುನ್ನ ಭಾರತ್ ಯೋಜನೆ ಚಾಲ್ತಿಯಲ್ಲಿತ್ತು. ಚುನಾವಣೆಯ ನಂತರ ಕೆಲವು ದಿನಗಳ ಕಾಲ ಸ್ಥಗಿತವಾಗಿತ್ತು. ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಮೇಲೆ ಈ ಯೋಜನೆ ಬಂದ ಆಗುತ್ತದೆ ಎಂಬ ಊಹಾಪೊಹಗಳು ಟೀಕೆಗಳು ಹರಿದಾಡಿತ್ತಿದ್ದವು. ಇಂತಹ ಟೀಕೆಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ ಇದೀಗ ಮಹತ್ವಾಕಾಂಕ್ಷೇಯ ಯೋಜನೆಯನ್ನು ಬೆಂಗಳೂರಿನಲ್ಲಿ ಮತ್ತೆ ಆರಂಭಿಸಿದೆ.