ಡೋಮ್​ ರಾಜಾ ನಿಧನಕ್ಕೆ ಮೋದಿ ಸಂತಾಪ ಸಲ್ಲಿಸಿದ್ದೇಕೆ? ಇಲ್ಲಿದೆ ಕಾರಣ?

Dom raja death2
Published on

ವಾರಾಣಸಿ: ವಾರಣಾಸಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರದ ವ್ಯಕ್ತಿಯೊಬ್ಬರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ವಾರಾಣಸಿಯ 'ಡೋಮ್​ ರಾಜಾ' ಎಂದೇ ಕರೆಯಲಾಗುತ್ತಿದ್ದ 55 ವರ್ಷದ ಜಗದೀಶ್​ ಚೌಧರಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್​ ಮಾಡಿದ್ದಾರೆ. ಪವಿತ್ರ ನಗರದ ಅವಿಚ್ಛಿನ್ನ ಸಂಪ್ರದಾಯದ ಪ್ರತಿನಿಧಿಯಾಗಿದ್ದರು ಜಗದೀಶ್​ ಚೌಧರಿ ಎಂದು ಹೇಳಿದ್ದಾರೆ.

ಇಷ್ಟಕ್ಕೂ ಯಾರೂ ಈ ಜಗದೀಶ್​ ಚೌಧರಿ, ಇವರನ್ನೇಕೆ ಡೋಮ್​ ರಾಜಾ ಎಂದು ಕರೆಯಲಾಗುತ್ತದೆ ಎಂಬುದನ್ನು ನೋಡುವುದಾದರೆ..., ವಾರಾಣಸಿಯ ವಿವಿಧ ಘಾಟ್​​ಗಳಲ್ಲಿ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತದೆ. ಈ ಅಂತ್ಯಕ್ರಿಯೆ ನಡೆಸುವವರ ಮುಖ್ಯಸ್ಥರಾಗಿದ್ದವರು ಈ ಜಗದೀಶ್​ ಚೌಧರಿ. ಈ ಕಾರಣಕ್ಕೆ ಇವರನ್ನು ಡೋಮ್​ ರಾಜಾ ಎಂದು ಕರೆಯಲಾಗುತ್ತದೆ.

ಮೋದಿ ಸಂತಾಪ ಸೂಚಿಸುವದಕ್ಕೆ ಇನ್ನೊಂದು ಕಾರಣವೂ ಇದೆ. ಮೋದಿ ವಾರಾಣಸಿಯಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಫರ್ಧೆಗೆ ಇಳಿದಾಗ ಅವರ ನಾಮಪತ್ರದಲ್ಲಿ ಡೋಮ್​ರಾಜಾ ಕೂಡ ಒಬ್ಬ ಸೂಚಕರಾಗಿದ್ದರು.

ಡೋಮ್​ ರಾಜಾ ಎನ್ನುವುದು ಬಹುಮುಖ್ಯ ಗೌರವವೂ ಆಗಿದೆ. ಜಗದೀಶ್​ ಚೌಧರಿ ಅವರಿಗೆ ವಾರಾಣಸಿಯ ಇನ್ನೊಂದು ಹೆಸರಾದ ಕಾಶಿಯ ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಮುಖರಾಗಿದ್ದಾರೆ. ಜೀವನದುದ್ದಕ್ಕೂ ಡೋಮ್​ ರಾಜಾ ಇಲ್ಲಿನ ಸಾಮಾಜಿಕ ಸೌಬಾರ್ದತೆಗಾಗಿ ಶ್ರಮಿಸಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.

ಇನ್ನೊಂದು ಮುಖ್ಯ ವಿಷಯವೆಂದರೆ, ಅಂತ್ಯಕ್ರಿಯೆ ನಡೆಸಲಾಗುವ ಮಣಿಕರ್ಣಿಕಾ ಹಾಗೂ ಹರಿಶ್ಚಂದ್ರ ಘಾಟ್​ಗಳಲ್ಲಿ ಬೆಂಕಿ ನಂದದಂತೆ ನೋಡಿಕೊಳ್ಳುವುದು ಇವರ ಕುಟುಂಬದ ಕಾಯಕವಾಗಿತ್ತು. ಈ ಬೆಂಕಿಯಿಂದಲೇ ಇವರ ಮನೆಗಳಲ್ಲಿ ಆಹಾರ ತಯಾರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net