ಅಯೋಧ್ಯೆಯಲ್ಲಿ ಮೋದಿ ದೀಪಾವಳಿ

PM Modi
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ ವರ್ಷ ದೀಪಾವಳಿಗೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಸುಮಾರು 7.5 ಲಕ್ಷ ಹಣತೆಗಳನ್ನು ಹಚ್ಚಿ ನಗರವನ್ನು ಬೆಳಗುವ ಯೋಜನೆ ರೂಪಿಸಲಾಗಿದೆ.

ಪ್ರಧಾನಿ ಜೊತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇರುತ್ತಾರೆ. ಅಯೋಧ್ಯೆಯಲ್ಲಿ ಮೋದಿ 10 ದಿನಗಳ ಕಾಲ ದೀಪಾವಳಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಇಲಾಖೆ ಮತ್ತು ಅಯೋಧ್ಯೆ ಅಭಿವೃದ್ಧಿ ಮಂಡಳಿ ಇದಕ್ಕಾಗಿ ಸಿದ್ಧತೆಗಳನ್ನು ಆರಂಭಿಸಿವೆ. ಸರಯೂ ನದಿ ದಡದ ಘಾಟ್​ನಲ್ಲಿ 7.5 ಲಕ್ಷ ಹಣತೆಗಳನ್ನು ಬೆಳಗಿ ಹೊಸ ಗಿನ್ನೆಸ್ ದಾಖಲೆ ಬರೆಯಲು ಅಯೋಧ್ಯೆ ಆಡಳಿತ ಪ್ರಯತ್ನಿಸಲಿದೆ. 2019ರಲ್ಲಿ 4,10,000 ಹಣತೆಗಳನ್ನು ಹಚ್ಚಲಾಗಿತ್ತು. 2020ರಲ್ಲಿ 6,06,569 ದೀಪಗಳನ್ನು ಬೆಳಗಿದ್ದು ಹೊಸ ಗಿನ್ನೆಸ್ ದಾಖಲೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net