

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಏರಬಾರದು. ಅವರ ಆಡಳಿತ ಇಲ್ಲಿಗೆ ಕೊನೆಯಾಗಲಿ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಮುಂದಿಲ್ಲ ಮೋದಿ-2024 ಎಂಬ ಧ್ಯೇಯದೊಂದಿಗೆ ರಾಮಸ್ವಾಮಿ ವೃತ್ತದಲ್ಲಿ ಸೋಮವಾರ ಗೋಡೆಬರಹ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಸೋಮಶೇಖರ್ ಮಾತನಾಡಿ, ದೇಶದ ಪ್ರಧಾನಿ ಸರ್ವಾಧಿಕಾರಿ ಹಿಟ್ಲರ್ ಮನಸ್ಥಿತಿಯನ್ನು ಹೊಂದಿರುವಂತವರು. ಕಳೆದ ಹತ್ತು ವರ್ಷಗಳಿಂದ ಮಾಧ್ಯಮದ ಜೊತೆಯಾಗಲಿ ಅಥವಾ ಸಾರ್ವಜನಿಕ ಸಂವಾದದಲ್ಲಿ ಭಾಗವಹಿಸಿಲ್ಲ. ಕೇವಲ ಏಕಮುಖ ಭಾಷಣದಿಂದಲೇ ಕಾಲ ಕಳೆಯುತ್ತಿದ್ದಾರೆ. ದೇಶದಲ್ಲಿ ಹಸಿವು ಬಡತನ ನಿರುದ್ಯೋಗ ತಾಂಡವಡುತ್ತಿದೆ. ಹಸಿವಿನ ಸೂಚ್ಯಂಕದಲ್ಲಿ ಬಾಂಗ್ಲಾ ದೇಶಕ್ಕಿಂತಲೂ ಕಡೆಯಾಗಿದೆ. ಇದಕ್ಕೆಲ್ಲ ಮೋದಿ ಅವರ ದುರಾಡಳಿತವೇ ಕಾರಣ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಮಾತನಾಡಿ, ಯಡಿಯೂರಪ್ಪ ಅವರು ಈ ನಾಡಿನ ಮುಖ್ಯಮಂತ್ರಿ ಆಗಿದ್ದವರು. ಅಂತಹವರು ಅಭಿಯಾನ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಈ ದೇಶದ ಈ ರಾಜ್ಯದ ಜನರ ಮನಸ್ಸಿನಲ್ಲಿ ಮೋದಿ ಅವರು ಅಳಿಸಿ ಹೋಗಿದ್ದಾರೆ. ಹಾಗಾಗಿ ಬಿಜೆಪಿಯವರು ಮೋದಿಯವರ ಹೆಸರನ್ನು ಗೋಡೆ ಮೇಲೆ ಬರೆಯುವ ಮೂಲಕ ನೆನಪಿಸುವಂತಹ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಜಿ.ಸೋಮಶೇಖರ್, ಶ್ರೀಧರ್, ಮಾಜಿ ಮೇಯರ್‌ಗಳಾದ ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಸದಸ್ಯರಾದ ಜೆ.ಗೋಪಿ, ಜೋಗಿ ಮಹೇಶ್, ಮಂಜು, ವಿಜಯ್‌ಕುಮಾರ್, ರವಿಶಂಕರ್, ಪರಶಿವಮೂರ್ತಿ, ಗುಣಶೇಖರ್, ವಿಶ್ವನಾಥ್, ರಮೇಶ್ ರಾಮಪ್ಪ, ಮಹ್ಮದ್ ಫಾರೂಖ್,ಮಧುರಾಜ್,ಇಂದಿರಾ, ಎನ್‌ಎಸ್‌ಯುಐ ಅಧ್ಯಕ್ಷ ಮನೋಜ್, ವಿನಯ್, ಕುಮಾರ್, ಲೋಕೇಶ್‌ಕುಮಾರ್, ನಾಗರತ್ನಾ ಮಂಜುನಾಥ್, ಉತ್ತನಹಳ್ಳಿ ಶಿವಣ್ಣ ಇದ್ದರು.