ಮೋದಿಯಿಂದ 'ಸ್ವರಾಜ್' ವೀಕ್ಷಣೆ; ಕೇಂದ್ರ ಸಚಿವ ಸಂಪುಟಕ್ಕಿಂದು 'ಶಿವಪ್ಪ ನಾಯಕ', 'ರಾಣಿ ಅಬ್ಬಕ್ಕ'ರ ದರ್ಶನ

Rani Abbakka
Published on

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಲುವಾಗಿ ಇಂದು ಕೇಂದ್ರ ಸಚಿವ ಸಂಪುಟದ ಸದಸ್ಯರಿಗೆ ರಾಜ್ಯದ ಶಿವಪ್ಪ ನಾಯಕ ಹಾಗೂ ರಾಣಿ ಅಬ್ಬಕ್ಕ ಅವರ ದರ್ಶನವಾಗಲಿದೆ. ಅರ್ಥಾತ್, ಇಂದು ಸಂಸತ್ತಿನಲ್ಲಿ ಶಿವಪ್ಪ ನಾಯಕ ಹಾಗೂ ರಾಣಿ ಅಬ್ಬಕ್ಕ ಅವರ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಲಿದೆ.

ದೂರದರ್ಶನದಿಂದ ಪ್ರಸ್ತುತಿ ಪಡಿಸಲಾಗಿರುವ ಸ್ವರಾಜ್​ ಸಾಕ್ಷ್ಯಚಿತ್ರ ಇಂದು ಸಂಜೆ ಸಂಸತ್ತಿನ ಬಾಲಯೋಗಿ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಅದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೀಕ್ಷಿಸಲಿದ್ದು, ಅವರೊಂದಿಗೆ ಸಚಿವ ಸಂಪುಟದ ಸದಸ್ಯರು ಕೂಡ ಜತೆ ಆಗಲಿರುವರು.

ಸಂಸತ್ತಿನಲ್ಲಿ ಪ್ರದರ್ಶನಗೊಳ್ಳಲಿರುವ 'ಸ್ವರಾಜ್' ವೀಕ್ಷಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಮುಖ್ಯಅತಿಥಿ ಎಂಬುದಾಗಿ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಇದರ ಜತೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಶಿವಪ್ಪ ನಾಯಕ ಹಾಗೂ ರಾಣಿ ಅಬ್ಬಕ್ಕ ಅವರ ಕುರಿತ ಸಾಕ್ಷ್ಯಚಿತ್ರಗಳೂ ಪ್ರದರ್ಶನಗೊಳ್ಳಲಿದ್ದು, ಕೇಂದ್ರದ ಸಚಿವರು, ಸಂಸದರು ಅವನ್ನು ವೀಕ್ಷಿಸಲಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net