

ಮೆಕ್ಸಿಕೋ: ಚುನಾವಣಾ ಪ್ರಚಾರದಲ್ಲಿ ಅನೇಕ ರೀತಿಯ ಭರವಸೆಗಳನ್ನು ಕೊಡುವವರನ್ನು ನೋಡಿರುತ್ತೀರಿ. ಆದರೆ ಈ ರೀತಿಯ ವಿಚಿತ್ರ ಪ್ರಚಾರವನ್ನು ನೀವು ಕೇಳಿರಲಿಕ್ಕೆ ಸಾಧ್ಯವೇ ಇಲ್ಲ..
ಮೆಕ್ಸಿಕೋದ ಸಂಸತ್ತಿನ ಚುನಾವಣೆ ಇದೇ ಆರನೇ ತಾರೀಖಿನಂದು ನಡೆಯಲಿದೆ. ಅನೇಕ ಪಕ್ಷಗಳು ಈ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿವೆ. ಅದರಂತೆ ಸೆಂಟರ್ ಲೆಫ್ಟ್ ಪ್ರೊಗ್ರೆಸ್ಸಿವ್ ಸೋಶಿಯಲ್ ನೆಟ್ವರ್ಕ್ ಪಾರ್ಟಿ ಕೂಡ ಚುನಾವಣಾ ಕಣದಲ್ಲಿದೆ. 2017ರಲ್ಲಿ ಎನ್ಜಿಒ ಆಗಿ ಆರಂಭವಾದ ಇದು ಕಳೆದ ಎರಡು ವರ್ಷಗಳಿಂದ ರಾಜಕೀಯ ಪಕ್ಷವಾಗಿ ಬದಲಾಗಿದೆ. ಈ ಪಕ್ಷದಿಂದ ಮಾಡೆಲ್ ಒಬ್ಬರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ರೊಸ್ಸಿಯೊ ಪಿನೋ ಹೆಸರಿನ ಮಾಡೆಲ್ ಸೆಂಟರ್ ಲೆಫ್ಟ್ ಪ್ರೊಗ್ರೆಸ್ಸಿವ್ ಸೋಶಿಯಲ್ ನೆಟ್ವರ್ಕ್ ಪಾರ್ಟಿಯಿಂದ ಚುನಾವಣೆಗೆ ನಿಂತಿದ್ದಾರೆ. ಈಗಾಗಲೇ ವಿಚಿತ್ರ ವಿಚಿತ್ರ ಪೋಸ್ಟರ್ಗಳನ್ನು ಆಕೆ ಹಂಚತೊಡಗಿದ್ದಾರಂತೆ. ಅದರಲ್ಲಿ ಒಂದು ಪೋಸ್ಟರ್ನಲ್ಲಿ ಸಂಪೂರ್ಣವಾಗಿ ಬೆತ್ತಲಾಗಿ ನಿಂತಿರುವ ರೊಸ್ಸಿಯೊ ಫೋಟೋವನ್ನೂ ಮುದ್ರಿಸಲಾಗಿದೆಯಂತೆ. ಆದರೆ ನನಗೆ ಚೀಪ್ ಪ್ರಚಾರ ಬೇಕಾಗಿಲ್ಲ ಎನ್ನುತ್ತಾರೆ ಆ ಮಾಡೆಲ್.
ರೊಸ್ಸಿಯೊ ಇನ್ನೂ ಒಂದು ವಿಶೇಷ ಕೆಲಸ ಮಾಡಿದ್ದಾರೆ. ತಾನೊಂದು ವೇಳೆ ಚುನಾವಣೆಯಲ್ಲಿ ಗೆದ್ದರೆ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ಮಹಿಳೆಯರಿಗೆ ಉಚಿತವಾಗಿ ಸ್ತನ ಶಸ್ತ್ರಚಿಕಿತ್ಸೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ. ಸಮಾಜದಲ್ಲಿ ಹೆಣ್ಣಿಗಿರುವ ಧೋರಣೆಯನ್ನು ತೆಗೆದುಹಾಕಬೇಕು ಅದಕ್ಕಾಗಿ ನಾನು ಜಯ ಸಾಧಿಸಬೇಕು ಎಂದಿದ್ದಾಳೆ ರೊಸ್ಸಿಯೊ. ಹಾಗಾದರೆ ಆಕೆ ಚುನಾವಣೆಯಲ್ಲಿ ಗೆಲ್ಲುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)