ಕುಖ್ಯಾತ ಸುಲಿಗೆಕೋರರ ಜತೆಗೆ ಕದ್ದ ಮೊಬೈಲ್ ಖರೀಸಿದಿಸಿದವನು ಅಂದರ್

police
Published on


ಕಲಬುರಗಿ ನಗರದ ವಿವಿಧ ಕಡೆಗಳಲ್ಲಿ ಜನರನ್ನು ಬೆದರಿಸಿ ಮೊಬೈಲ್‌ಗಳನ್ನು ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ ಮತ್ತು ಕದ್ದು ಮೊಬೈಲ್ ಖರೀದಿಸುತ್ತಿದ್ದ ವ್ಯಕ್ತಿ ಸೇರಿದಂತೆ ನಾಲ್ವರನ್ನು  ಸಬ್ ಅರ್ಬನ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
 ಮಹ್ಮದ್ ಸಾಜೀದ್, ಮಹ್ಮದ್ ರಿಯಾಜ್, ಸೈಯದ್‌ಗುಲಾಮ್ ಮತ್ತು ಮಹ್ಮದ ನುಮನ್ ಬಂಧಿತರು. ಇವರಿಂದ ೧.೪೦ ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ೧೪ ಮೊಬೈಲ್ ಹಾಗೂ ಒಂದು ಪಲ್ಸರ್ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು  ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net