ಮೊಬೈಲ್​ ರಿಪೇರಿ ಮಾಡಿಸಿಕೊಳ್ಳುವ ನೆಪದಲ್ಲಿ ಬಂದವಳು ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿದ್ಳು!

mobile vedio
Published on

ಬೆಂಗಳೂರು: ಹಾಳಾಗಿದ್ದ ಮೊಬೈಲ್ ಅನ್ನು ರಿಪೇರಿ ಮಾಡಿಸಿಕೊಳ್ಳಲು ಬಂದ ಮಹಿಳೆಯ ಷಡ್ಯಂತ್ರಕ್ಕೆ ಸಿಲುಕಿದ ಮೊಬೈಲ್​ ರಿಪೇರಿ ಮಾಡುವವನ ಕಥೆ ಇದು.

ಕಲಾಸಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಜಿಯಾವುಲ್ಲ ಎಂಬಾತ ಮೊಬೈಲ್​ ರಿಪೇರಿ ಕೆಲಸ ಮಾಡಿಕೊಂಡಿದ್ದಾರೆ. ಅಂಗಡಿಗೆ ಬಂದ ದೌಲತ್ ಎಂಬ ಮಹಿಳೆ ತನ್ನ ಮೊಬೈಲ್ ಹಾಳಾಗಿದೆ. ರಿಪೇರಿ ಮಾಡಿಕೊಡಿ ಎಂದಿದ್ದಳು. ಇದಾದ ಬಳಿಕ ತನ್ನ ಸಹಚರರೊಂದಿಗೆ ಮಾಸ್ಟರ್​ಪ್ಲ್ಯಾನ್​ ಮಾಡಿಕೊಂಡು ಜಿಯಾವುಲ್ಲನ ಮನೆಗೆ ಬಂದಿದ್ದ ಆಕೆತ ತಂಡ ಆತನ ಬಟ್ಟೆಬಿಚ್ಚಿಸಿ ಬೆತ್ತಲೆ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದರಂತೆ. ಇದನ್ನೂ ಓದಿರಿ ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

ಮೊಬೈಲ್​ ರಿಪೇರಿ ನೆಪದಲ್ಲಿ ಬಂದಿದ್ದ ಮಹಿಳೆಯು ಜಿಯಾವುಲ್ಲನ ಬಳಿ ಹಣವಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಳು. ಅದನ್ನು ಲಪಟಾಯಿಸಲು ತನ್ನ ಸ್ನೇಹಿತರಾದ ಸಲ್ಮಾನ್, ಅಸಾದ್, ಖಾಸಿಫ್ ಜತೆ ಸೇರಿ ಷಡ್ಯಂತ್ರ ರೂಪಿಸಿದ್ದಳು. ಅದರಂತೆ ಜಿಯಾವುಲ್ಲನ ಮನೆಗೆ ಬಂದಿದ್ದ ದೌಲತ್ ಹಾಗೂ ಸಹಚರರು ಆತನ ಬಟ್ಟೆ ಬಿಚ್ಚಿಸಿ ವಿಡಿಯೋ ಚಿತ್ರೀಕರಿಸಿದ್ದರು. ಅಲ್ಲದೆ ಹಲ್ಲೆ ನಡೆಸಿ 25 ಸಾವಿರ ಹಣ ದೋಚಿದ್ದರು. ಮತ್ತಷ್ಟು ಹಣ ಕೊಡದಿದ್ದರೆ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುವುದಾಗಿ ಹಾಗೂ ಚಾಕು ತೋರಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತ ಆರೋಪಿಸಿದ್ದಾರೆ.

ದೌಲತ್​ನ ಕಿರುಕುಳಕ್ಕೆ ಬೇಸತ್ತ ಜಿಯಾವುಲ್ಲ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಆರೋಪಿ ಸಲ್ಮಾನ್​ನನ್ನು ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net