ಮೊಬೈಲ್​​ ಫೋನ್​​ ಕಳೆದು ಹೋದ್ರೆ ಗಾಬರಿ ಆಗ್ಬೇಡಿ; ಮೊಬೈಲ್‌ ಬ್ಲಾಕ್​​ ಮಾಡಲು ಬಿಡುಗಡೆಯಾಗಿದೆ ರಾಜ್ಯ ಸರ್ಕಾರದ ಹೊಸ ಆ್ಯಪ್

mmmix
Published on

ಮೊಬೈಲ್​​ ಕಳೆದು ಹೋದ ತಕ್ಷಣ ನಮಗಾಗುವ ಗಾಬರಿ ಅಷ್ಟಿಷ್ಟಲ್ಲ. ಕೇವಲ ದುಬಾರಿ ಬೆಲೆ ವಸ್ತು ಎನ್ನುವುದಕ್ಕಿಂತಲೂ ಅದರಲ್ಲಿರುವ ಸಂಪರ್ಕ ಸಂಖ್ಯೆಗಳು, ಒಡನಾಡಿಗಳ ಜೊತೆಗಿರುವ ಫೋಟೋಗಳು ಮತ್ತು ಖಾಸಗಿ ಮಾಹಿತಿಗಳು ಸೋರಿಕೆಯಾಗುವ ಭಯ ಸಾಕಷ್ಟು ಕಾಡುತ್ತಿರುತ್ತದೆ.


ಮೊಬೈಲ್ ಕಳವಾದಾಗ ಅತ್ಯಂತ ಮುಖ್ಯ ಮಾಹಿತಿ ಮತ್ತು ನಮ್ಮ ಮೊಬೈಲ್​ ಡೇಟಾ ಸೋರಿಕೆಯಾಗುವ ಟೆನ್ಶನ್​ ತುಂಬಾನೆ ಇರುತ್ತೆ.
ಆದ್ರೆ ಇನ್ಮುಂದೆ ನಿಮ್ಮ ಸ್ಮಾರ್ಟ್​ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಮೊಬೈಲ್‌ ಅನ್ನು ಬ್ಲಾಕ್‌ ಮಾಡಲು ಕರ್ನಾಟಕ ಪೊಲೀಸ್‌ ಇಲಾಖೆ ಆರಂಭಿಸಿರುವ ಕರ್ನಾಟಕ ರಾಜ್ಯ ಪೊಲೀಸ್‌ ಆ್ಯಪ್( KSP Application ) ಸಹಾಯ ಮಾಡಲಿದೆ.

ನಿಮ್ಮ ಬಳಿ ಇನ್ನೊಂದು ಮೊಬೈಲ್‌ ಇದ್ದರೆ ಅಥವಾ ಮನೆಯವರದ್ದು, ಸ್ನೇಹಿತರ ಮೊಬೈಲ್‌ನಲ್ಲಿ ಈ ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿ ಬ್ಲಾಕ್‌ ಮಾಡಿ ದೂರು ದಾಖಲಿಸಬಹುದು.
ಗಳೂರು ನಗರ ಪೊಲೀಸರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಯಾವರೀತಿ ನೋಂದಣಿ ಮಾಡಬೇಕು ಎಂಬ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.


ಕೇಂದ್ರ ಸರ್ಕಾರ ಕೂಡ ಜನರ ಫೋನ್ ಮತ್ತು ಡೇಟಾ ಕಳ್ಳತನಕ್ಕೆ ಪರಿಹಾರ ಕಂಡುಹಿಡಿದಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೆ ”ಸಂಚಾರ್ ಸಾಥಿ ಪೋರ್ಟಲ್” ಅನ್ನು ಪ್ರಾರಂಭಿಸಸಿದದೆ. ಸಂಚಾರ್ ಸಾಥಿ ಪೋರ್ಟಲ್ ಅಡಿಯಲ್ಲಿ, ಬಳಕೆದಾರರು ತಮ್ಮ ಫೋನ್ ಅನ್ನು ಎಲ್ಲಿದೆ ಎಂದು ಹುಡುಕಬಹುದು ಅಥವಾ ಸ್ವಿಚ್ ಆಫ್ ಮಾಡಬಹುದು. ಆ್ಯಪಲ್‌ ಐಫೋನ್​ನಲ್ಲಿರುವ ಫೈಂಡ್ ಮೈ ಫೋನ್ ವೈಶಿಷ್ಟ್ಯದಂತೆ ಇದು ಆಂಡ್ರಾಯ್ಡ್ ಫೋನ್​ನಲ್ಲಿ ಕಾರ್ಯನಿರ್ವಹಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net