'ಕಾವೇರಿ ಮಾತೆ ಮುನಿಸಿದ ಅನುಭವವಿದೆ ಸಾಕು, ಅಧಿಕಾರಿಗಳು ಇಷ್ಟಬಂದಂತೆ ನಡೆದರೆ ಹೇಗೆ?'

Talakaveri Thirthodbhava and MLC Veena Achchaiah
Published on

ಕೊಡಗು: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಕಾರ್ಯಕ್ರಮ ನಡೆಯತ್ತಿರುವಾಗಲೇ ಹೊರಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮತ್ತು ಪೊಲೀಸರ ನಡುವೆ ಮಾತಿನಚಕಮಕಿ ಏರ್ಪಟ್ಟಿದೆ. "ಕಾವೇರಿ ಮಾತೆ ಮುನಿಸಿಕೊಂಡ ಅನುಭವವಿದೆ ಸಾಕು, ಅಧಿಕಾರಿಗಳು ಇಷ್ಟಬಂದಂತೆ ನಡೆದುಕೊಂಡರೆ ಹೇಗೆ?' ಎಂದು ವೀಣಾ ಅಚ್ಚಯ್ಯ ಅವರು ಆಕ್ರೋಶ, ಅಸಮಾಧಾನ ಹೊರಹಾಕಿದ್ದಾರೆ.

ಕಾವೇರೀ ತೀರ್ಥೋದ್ಭವ ಕಾರ್ಯಕ್ರಮ ಕೊಡಗಿನವರಿಗೆ ಅತ್ಯಂತ ಪವಿತ್ರವಾದದು. ಇಲ್ಲಿ ಸಾರ್ವಜನಿಕರಿಗೆ ಅವಕಾಶ ನಿರಾಕರಿಸಿ, ಅಧಿಕಾರಿಗಳು ಇಷ್ಟಬಂದಂತೆ ನಡೆದುಕೊಂಡರೆ ಅದು ಸಹನೀಯವಲ್ಲ. ಇಲ್ಲಿಯವರು ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಕೋವಿಡ್​-19 ನಿಯಮಗಳನ್ನು ಪಾಲಿಸಿಕೊಂಡು ಬರ್ತಿದ್ದಾರೆ. ಅವರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕೊಡಿ. ಇಲ್ಲದೇ ಹೋದರೆ ನಾನು ಕೂಡ ಇದರಲ್ಲಿ ಭಾಗಿಯಾಗುವುದಿಲ್ಲ ಎಂದು ಹಟಹಿಡಿದರು.

ಪೊಲೀಸರು ಮತ್ತು ಅಧಿಕಾರಿಗಳು ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯನವರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರು. ಈ ನಡುವೆ, ಕಾವೇರಿ ತೀರ್ಥೋದ್ಭವ ಸಂಪನ್ನವಾಗಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net