More

    ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂಪನ್ನ

    ಮಡಿಕೇರಿ: ‘ಜೀವನದಿ’ ಕಾವೇರಿ ಉಗಮ ಸ್ಥಳ ತಲಕಾವೇರಿಯಲ್ಲಿ ನಡೆಯುವ ವಾರ್ಷಿಕ ಪವಿತ್ರ ತೀರ್ಥೋದ್ಭವ ಇಂದು ಬೆಳಗ್ಗೆ 7.05 ಕ್ಕೆ ಸಂಪನ್ನವಾಗಿದೆ. ಅದಕ್ಕೂ ಮುಂಚಿತವಾಗಿ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳು ನೆರವೇರಿಸಿದ್ದು, ಸರಿಯಾದ ಸಮಯಕ್ಕೆ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ ಸಂಪನ್ನವಾಗಿದೆ. ಈ ಬಾರಿ ಕರೊನಾ ಕಾರಣಕ್ಕೆ ಸರಳವಾಗಿ ತೀರ್ಥೋದ್ಭವ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆಹ್ವಾನಿತರಷ್ಟೇ ಕಾರ್ಯಕ್ರಮದ ಸಂದರ್ಭದಲ್ಲಿ ಹಾಜರಿದ್ದರು.

    ತೀರ್ಥೋದ್ಭವದ ಬಳಿಕ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗಿದ್ದು, ಕೋವಿಡ್ -19 ಟೆಸ್ಟ್ ಮಾಡಿಸಿ ನೆಗೆಟಿವ್​ ಪ್ರಮಾಣ ಪತ್ರ ಹೊಂದಿದವರಿಗಷ್ಟೇ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. ಪವಿತ್ರ ಸ್ನಾನಕ್ಕಾಗಿ ಭಕ್ತರು ಈಗಾಗಲೇ ಸ್ಥಳಕ್ಕೆ ಆಗಮಿಸಿದ್ದಾರೆ.

    ಇದನ್ನೂ ಓದಿ: ತೀರ್ಥೋದ್ಭವಕ್ಕೆ ದಿನಗಣನೆ, ತಲಕಾವೇರಿಗೆ ಹೋಗುವ ಮುನ್ನ ಇದನ್ನು ಮರೆಯದಿರಿ!

    ಅರ್ಚಕರು, ಜನಪ್ರತಿನಿಧಿಗಳು, ವ್ಯವಸ್ಥಾಪನಾ ಸಮಿತಿಯವರು ಸೇರಿ 55 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಇವರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರಬೇಕು ಎಂದು ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದ್ದರು.

    ಇದನ್ನೂ ಓದಿ: ದೇಣಿಗೆ ಸಂಗ್ರಹದಲ್ಲಿ ಬಿಜೆಪಿ ನಂಬರ್ 1; 7 ವರ್ಷದಲ್ಲಿ 2,818 ಕೋಟಿ ರೂ. ಸ್ವೀಕಾರ

    ತೀರ್ಥೋದ್ಭವ ವೇಳೆ ಕಡಿಮೆ ಜನರಿಗೆ ಅವಕಾಶ ನೀಡಲಾಗುವುದು. ಬ್ರಹ್ಮಕುಂಡಿಕೆ ಮುಂಭಾಗದ ಕಲ್ಯಾಣಿಯಲ್ಲಿ ತೀರ್ಥಸ್ನಾನ ನಿಷೇಧಿಸಲಾಗಿದೆ. ತೀರ್ಥೋದ್ಭವ ಬಳಿಕ ಅರ್ಚಕರು ತೀರ್ಥ ಪ್ರೋಕ್ಷಣೆ ಮಾಡುತ್ತಾರೆ ಎಂದು ಸಚಿವ ಸೋಮಣ್ಣ ಎರಡು ದಿನಗಳ ಹಿಂದೆ ತಿಳಿಸಿದ್ದರು. (ದಿಗ್ವಿಜಯ ನ್ಯೂಸ್)

    17ರಂದು ಬೆಳಗ್ಗೆ 7 ಗಂಟೆ ಸುಮಾರಿಗೆ ತಲಕಾವೇರಿ ತೀರ್ಥೋದ್ಭವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts