More

    8 ದಿನದ ಬಳಿಕ ತಲಕಾವೇರಿಯಲ್ಲಿ ಪೂಜಾ ಕೈಂಕರ್ಯ ಪುನಾರಂಭ

    ಕೊಡಗು: ರಣಭೀಕರ ಮಳೆಯಿಂದಾಗಿ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಕ್ಷೇತ್ರದಲ್ಲಿ 8 ದಿನಗಳಿಂದ ಸ್ಥಗಿತಗೊಂಡಿದ್ದ ಪೂಜಾ ಕೈಂಕರ್ಯ ಇಂದಿನಿಂದ(ಶುಕ್ರವಾರ) ಪುನಾರಂಭಗೊಂಡಿದೆ.

    ಗಣಪತಿ ಪೂಜೆ, ದೋಷಪರಿಹಾರ ಪೂಜೆ ಮೂಲಕ ನೀಲೇಶ್ವರ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಬೆಳಗ್ಗೆ 8.30ರಿಂದ ಪೂಜಾ ವಿಧಾನ ಆರಂಭಗೊಂಡಿತು. ಕಾವೇರಿ ಕುಂಡಿಕೆ, ಅಗಸ್ತೇಶ್ವರನಿಗೂ ಪೂಜೆ ನೆರವೇರಿತು. ಶಾಸಕ ಕೆ.ಜಿ.ಬೋಪಯ್ಯ, ದೇವಾಲಯದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

    ಇದನ್ನೂ ಓದಿರಿ ಭೂಸಮಾಧಿ ಆದ ನಾರಾಯಣಾಚಾರ್​ರ ಮನೆಯಲ್ಲಿತ್ತು ಲಕ್ಷ ಲಕ್ಷ ಹಣ , ಚಿನ್ನಾಭರಣ?

    ಗಜಗಿರಿ ಬೆಟ್ಟ ಕುಸಿದು ಕ್ಷೇತ್ರ ಪ್ರಧಾನ ಅರ್ಚಕ ಟಿ.ಎಸ್​. ನಾರಾಯಣಾಚಾರ್​ ಸೇರಿದಂತೆ ಐವರು ಭೂಸಮಾಧಿಯಾದ ಬಳಿಕ ಆ.6ರಿಂದ ಕ್ಷೇತ್ರದಲ್ಲಿ ನಿತ್ಯಪೂಜೆ ಸ್ಥಗಿತಗೊಂಡಿತ್ತು. ಒಮ್ಮೆಯೂ ತಲಕಾವೇರಿ ಕ್ಷೇತ್ರದಲ್ಲಿ ನಿತ್ಯಪೂಜೆ ಸ್ಥಗಿತಗೊಂಡಿರಲಿಲ್ಲ. ಪ್ರತಿಕೂಲ ಪರಿಸ್ಥಿತಿ ನಡುವೆಯೂ ಪೂಜಾ ಕೈಂಕರ್ಯ ನಡೆದಿತ್ತು. ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ 1 ವಾರ ಕಾವೇರಿ ಕ್ಷೇತ್ರದಲ್ಲಿ ನಿತ್ಯ ಪೂಜೆ ನಡೆಯಲಿಲ್ಲ.

    ಭೀಕರ ಮಳೆಯಿಂದಾಗಿ ಬೆಟ್ಟದ ಸಾಲು ಕುಸಿದು ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣಾಚಾರ್​ರ ಕುಟುಂಬಸ್ಥರು ಎರಡು ಮನೆಗಳು ನಾಮಾವೇಶಗೊಂಡಿದ್ದವು. ನಾರಾಯಣಾಚಾರ್​, ಇವರ ಪತ್ನಿ ಸೇರಿದಂತೆ ಐವರು ನಾಪತ್ತೆಯಾಗಿದ್ದರು. ಈ ಪೈಕಿ ನಾರಾಯಣಾಚಾರ್​ ಮತ್ತು ಅವರ ಹಿರಿಯ ಸಹೋದರನ ಶವ ಪತ್ತೆಯಾಗಿತ್ತು. ಆದ್ರೆ, ಇನ್ನು ಮೂವರು ಪತ್ತೆಯಾಗಿಲ್ಲ. ಹಾಗಾಗಿ ತಲಕಾವೇರಿಯಲ್ಲಿ ಇಂದು ಕೂಡ ಶೋಧ ಕಾರ್ಯ ಮುಂದುವರಿದಿದೆ.

    ಡಿಜೆ ಹಳ್ಳಿ ಗಲಭೆಕೋರರಿಗೆ ಸರ್ಕಾರದ ಸೌಲಭ್ಯ ಕೊಡದಿರಲು ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts