More

    ಭೂಸಮಾಧಿ ಆದ ನಾರಾಯಣಾಚಾರ್​ರ ಮನೆಯಲ್ಲಿತ್ತು ಲಕ್ಷ ಲಕ್ಷ ಹಣ , ಚಿನ್ನಾಭರಣ?

    ಬೆಂಗಳೂರು: ಕಾವೇರಿ ತೀಥ೯ಕ್ಷೇತ್ರ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟದ ಸಾಲು ಕುಸಿದು ನಾಪತ್ತೆಯಾಗಿರುವ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣಾಚರ್​ ಆಗರ್ಭ ಶ್ರೀಮಂತರು ಎಂಬ ಮಾಹಿತಿಯನ್ನು ಅವರ ಆಪ್ತರು ಹೊರಹಾಕಿದ್ದಾರೆ. ಆ ಮೂಲಕ ನಾರಾಯಾಣಾಚಾರ್ ಮನೆಯಲ್ಲಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ಇತ್ತೇ? ಅವುಗಳ ಜತೆಯಲ್ಲಿ ಅವರ ಕುಂಟುಂಬವೂ ಭೂಸಮಾಧಿ ಆಗಿರುವ ಶಂಕೆ ವ್ಯಕ್ತವಾಗಿದೆ.

    ಕಾಫಿ ಎಸ್ಟೇಟ್​ ಹೊಂದಿರುವ ನಾರಾಯಣಾಚಾರ್​ಗೆ ಬೆಂಗಳೂರಿನಲ್ಲಿ ಸೈಟು, ಮನೆ ಇದೆ. ಭಾಗಮಂಡಲದಲ್ಲಿ 40 ಎಕರೆ ಜಮೀನು, ಇಲ್ಲಿನ ಜೂನಿಯರ್​ ಕಾಲೇಜು ಬಳಿ 12 ಎಕರೆ ಕೃಷಿ ಭೂಮಿ, ರಸ್ತೆ ಪಕ್ಕ 7 ಎಕರೆ ಜಮೀನನ್ನು ಹೊಂದಿದ್ದಾರೆ ಎಂದು ನಾರಾಯಣಾಚಾರ್​ರ ಆಪ್ತರು​ ಮಾಹಿತಿ ನೀಡಿದ್ದಾರೆ. ಅಲ್ಲದೆ ಮಂಗಳೂರಿನಲ್ಲೂ ಪ್ಲ್ಯಾಟ್ ಹೊಂದಿದ್ದರು ಎಂದು ತಿಳಿಸಿದ್ದಾರೆ. ಈ ಮೂಲಕ ಅರ್ಚಕರಿಗೆ ಅಪಾರ ಪ್ರಮಾಣದ ಆಸ್ತಿ ಇರೋದು ಗೊತ್ತಾಗುತ್ತಿದೆ.

    ಇದನ್ನೂ ಓದಿರಿ ಅರ್ಚಕರ ಭೂಸಮಾಧಿ ಸ್ಥಳದಲ್ಲಿ ಸಿಕ್ಕಿದೆ ‘ಸಮಾಧಿ ನಿರ್ಣಯ’ ಪುಸ್ತಕ! ಉತ್ತರ ಸಿಗದ ಮರಣ ರಹಸ್ಯ…

    ಈ ಹಿಂದೆ ನಾರಾಯಣಾಚಾರ್​ ಅವರು ಫಾರಿನ್​ಗೆ ಹೋಗುವ ಸಂದರ್ಭದಲ್ಲಿ ಬ್ಯಾಂಕ್​ ಲಾಕರ್​ನಲ್ಲಿ ಕೆಲ ಆಭರಣಗಳನ್ನು ಇಟ್ಟಿದ್ದರು. ವಾಪಸ್​ ಬಂದ ಬಳಿಕ ಚಿನ್ನಾಭರಣಗಳನ್ನು ಮನೆಯಲ್ಲಿ ತಂದು ಇಟ್ಟುಕೊಂಡಿದ್ದರು. ಖಾಸಗಿಯಾಗಿ ಅವರಿಗೆ ಎಷ್ಟು ಆಸ್ತಿ-ಸಂಪತ್ತು ಇತ್ತು ಎಂಬುದನ್ನು ನನಗೆ ಗೊತ್ತಿರುವಷ್ಟು ಹೇಳಿದ್ದೇನೆ. ಆದರೆ ಇಂತಿಷ್ಟೇ ಇತ್ತು ಎಂಬ ಖಚಿತ ಮಾಹಿತಿ ನನಗೆ ಗೊತ್ತಿಲ್ಲ ಎಂದು ಅವರ ಆಪ್ತ ಸತೀಶ್​ ಕುಮಾರ್​  ತಿಳಿಸಿದ್ದಾರೆ.

    ನಾರಾಯಣಾಚಾರ್​ಗೆ ಓರ್ವ ಮಗ, ಇಬ್ಬರು ಹೆಣ್ಣು ಮಕ್ಕಳು. ಮಗ 20 ವರ್ಷದ ಹಿಂದೆಯೇ ಕಾಲವಾಗಿದ್ದಾರೆ. ಟೇಬಲ್ ಟೆನ್ನಿಸ್ ಆಟಗಾರನಾಗಿದ್ದ ಮಗನಿಗೆ ಸ್ಪೋರ್ಟ್ಸ್ ಕೋಟಾದಡಿ ಬೆಂಗಳೂರಿನಲ್ಲಿ ಒಂದು ಸೈಟ್ ನೀಡಲಾಗಿತ್ತು. ಆ ಸೈಟ್​ನಲ್ಲೇ ಮನೆ ನಿರ್ಮಾಣ‌ ಮಾಡಲಾಗಿದೆ. ಹೆಣ್ಣುಮಕ್ಕಳಾದ ಶಾರದಾ ಆಚಾರ್ ಮತ್ತು ನಮಿತಾ ಆಚಾರ್​ ಇಬ್ಬರೂ ಅಂತರ್ ಧರ್ಮೀಯರನ್ನ ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಮಗಳ ಮನೆಗೆ ನಾರಾಯಣಾಚಾರ್ ಹೋಗಿಬಂದಿದ್ದರು. ಮಡಿಕೇರಿ ಸುತ್ತಮುತ್ತ ಅಪಾರ ಆಸ್ತಿ ಹೋಂದಿರುವ ಅರ್ಚಕರಿಗೆ ಕೇರಳ-ಕರ್ನಾಟಕ ಗಡಿಯಲ್ಲಿ ಮತ್ತೊಬ್ಬರ ಪಾಲುದಾರಿಕೆಯಲ್ಲಿ‌ 80 ಎಕರೆ ಕಾಫಿ ತೋಟ ಇರುವ ಬಗ್ಗೆ ಆಪ್ತ ಮೂಲಗಳಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಮನೆಯಲ್ಲಿ 7 ಕ್ವಿಂಟಾಲ್ ಏಲಕ್ಕಿ, 30 ಕ್ಚಿಂಟಾಲ್ ಕರಿಮೆಣಸು ಇತ್ತು. ಅದೆಲ್ಲವೂ ಭೂಸಮಾಧಿಯಾಗಿದೆ.

    ಆ.5ರಂದು ಸಂಭವಿಸಿದ ಭೂಕುಸಿತಕ್ಕೆ ನಾರಾಯಣಾಚಾರ್​ ಮನೆ ಮತ್ತು ಅವರ ಸಂಬಂಧಿಕರ ಮನೆ ನಾಮಾವೇಶಗೊಂಡಿದೆ. ಅಲ್ಲದೆ ಅಲ್ಲಿ ವಾಸವಿದ್ದ ಅರ್ಚಕರ ಕುಟುಂಬಸ್ಥರು ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನಾರಾಯಣಾಚಾರ್​ರ ಹಿರಿಯ ಸಹೋದರ ಆನಂದತೀರ್ಥರ ಶವ, ಅವರ ಮನೆಯಲ್ಲಿದ್ದ ಅಪಾರ ಪ್ರಮಾಣದ ಏಲಕ್ಕಿ, ಕಾಳುಮೆಣಸು ತುಂಬಿದ್ದ ಚೀಲಗಳೂ ಸಿಕ್ಕಿವೆ. ಅಲ್ಲದೆ ‘ಸಮಾಧಿ ನಿರ್ಣಯ’ ಪುಸ್ತಕವೂ ಸಿಕ್ಕಿತ್ತು.

    ಹಿಂದು ದೇಗುಲದಲ್ಲಿ ಏಸುಕ್ರಿಸ್ತನ ಫೋಟೋ ಇಟ್ಟು ಅರ್ಚಕನಿಂದ ಪೂಜೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts