ವಿಧಾನ ಪರಿಷತ್ ಚುನಾವಣೆ: 12 ಗಂಟೆ ವೇಳೆಗೆ ಶೇಕಡ 35ರ ಗಡಿ ದಾಟಿದ ಮತದಾನ

RR Nagar Constitutency voting
Published on

ಬೆಂಗಳೂರು: ವಿಧಾನ ಪರಿಷತ್​ನ ನಾಲ್ಕು ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಮಧ್ಯಾಹ್ನ ವಾಗುತ್ತಿರುವಂತೆ ಮತದಾನ ಪ್ರಕ್ರಿಯೆ ಚುರುಕಾಗಿದೆ. ಬೆಳಗ್ಗೆ 8 ರಿಂದ 10 ಗಂಟೆಯ ಎರಡು ಗಂಟೆ ಅವಧಿಯಲ್ಲಿ ಸರಾಸರಿ ಶೇಕಡ 8.2 ಮತದಾನವಾದರೆ ನಂತರ ಎರಡು ಗಂಟೆ ಅವಧಿಯಲ್ಲಿ ಶೇಕಡ 29.35 ಮತದಾನವಾಗಿದೆ.

ಬೆಳಗ್ಗೆ 10 ರಿಂದ 12 ರವರೆಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ 36.49%, ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ 32%, ಆಗ್ನೇಯ ಪದವೀಧರ ಕ್ಷೇತ್ರ (ಬೆಂಗಳೂರು)ದಲ್ಲಿ- 24%, ಪಶ್ಚಿಮ ಪದವೀಧರ ಕ್ಷೇತ್ರ ( ಬೆಳಗಾವಿ)ದಲ್ಲಿ- 24.89% ಮತಚಲಾವಣೆಯಾಗಿದೆ. ಚಿತ್ರದುರ್ಗ ಸೇರಿ ಕೆಲವು ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್ ನಿಯಮ, ಚುನಾವಣಾ ನಿಯಮ ಉಲ್ಲಂಘನೆ ಮಾಡಿದ್ದಾಗಿಯೂ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net