ಉಡುಪಿಯಲ್ಲಿ ಶೇ.96.57 ಮತದಾನ

udp-21-election
Published on

ಉಡುಪಿ: ವಿಧಾನ ಪರಿಷತ್ತಿನ ದಕ್ಷಿಣ ಕನ್ನಡ ಸ್ಥಳಿಯ ಸಂಸ್ಥೆಗಳ ಸದಸ್ಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜಿಲ್ಲೆಯ 2480 ಮತದಾರರ ಪೈಕಿ 2395 ಮಂದಿ ಹಕ್ಕು ಚಲಾಯಿಸಿದ್ದು, ಶೇ.96.57ರಷ್ಟು ಮತದಾನವಾಗಿದೆ.

ಕಾರ್ಕಳ ತಾಲೂಕಿನಲ್ಲಿ ಗರಿಷ್ಠ ಶೇ. 99.28 ಹಾಗೂ ಬೈಂದೂರು ತಾಲೂಕಿನಲ್ಲಿ ಕನಿಷ್ಠ ಶೇ. 88.80ರಷ್ಟು ಮತದಾನವಾಗಿದೆ. ಕಾಪು ತಾಲೂಕಿನಲ್ಲಿ ಶೇ.97.77, ಹೆಬ್ರಿ ತಾಲೂಕಿನಲ್ಲಿ 99.18, ಕುಂದಾಪುರ ತಾಲೂಕಿನಲ್ಲಿ 93.59, ಉಡುಪಿ ತಾಲೂಕಿನಲ್ಲಿ 99.18, ಬ್ರಹ್ಮಾವರ ತಾಲೂಕಿನಲ್ಲಿ 98.83ರಷ್ಟು ಮತದಾನ ನಡೆದಿದೆ.

2 ಪಂಚಾಯಿತಿ ಬಹಿಷ್ಕಾರ

ಕಸ್ತೂರಿ ರಂಗನ್​ ವರದಿ ಜಾರಿ ವಿರೋಧಿಸಿ ಉಡುಪಿ ಜಿಲ್ಲೆಯ 2 ಗ್ರಾಪಂಗಳು ಸಂಪೂರ್ಣ ಮತದಾನ ಬಹಿಷ್ಕಾರ ಮಾಡಿವೆ. ಬೈಂದೂರು ತಾಲೂಕಿನ ಜಡ್ಕಲ್​ ಪಂಚಾಯಿತಿಯಲ್ಲಿ ಎಲ್ಲಾ 18 ಮಂದಿ ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ಹಿಂದೆ ಸರಿದಿದ್ದು, ಸೋಮವಾರ ಎಲ್ಲರೂ ಮೊಬೈಲ್​ ಸ್ವಿಚ್​ ಆ್​ ಮಾಡಿಕೊಂಡಿದ್ದರು. ಭಾನುವಾರ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಪಂಚಾಯಿತಿಗೆ ಭೇಟಿ ನೀಡಿ ಮನವಿ ಮಾಡಿದರೂ ಸದಸ್ಯರು ಮತದಾನ ನಡೆಸಿಲ್ಲ. ಅದೇ ರೀತಿ ಕುಂದಾಪುರ ತಾಲೂಕಿನ ಕೆರಾಡಿ ಪಂಚಾಯಿತಿಯಲ್ಲಿ ಎಲ್ಲಾ 14 ಮಂದಿ ಸದಸ್ಯರು ಮತದಾನದಿಂದ ದೂರ ಉಳಿದಿದ್ದಾರೆ. ತಹಶೀಲ್ದಾರ್​ ಮನವಿ ಮೇರೆಗೆ ಮತಗಟ್ಟೆಗೆ ಆಗಮಿಸಿದ್ದರೂ ಓಟು ಮಾಡದೆ ವಾಪಾಸು ತೆರಳಿದ್ದಾರೆ. ಕಸ್ತೂರಿ ರಂಗನ್​ ವರದಿ ಬಗ್ಗೆ ಅಸಮಧಾನ ಹೊಂದಿದ್ದ 8 ಪಂಚಾಯಿತಿಗಳಲ್ಲಿ 6 ಪಂಚಾಯಿತಿಗಳ ಸದಸ್ಯರು ಮತದಾನದಲ್ಲಿ ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net