ಸದನದಲ್ಲಿ ಅಸ್ವಸ್ಥಗೊಂಡ ಯತ್ನಾಳ್, ಚಿಕಿತ್ಸೆಗಾಗಿ ದಾಖಲು​; ಆಸ್ಪತ್ರೆಗೆ ಧಾವಿಸಿದ ಪತ್ನಿ-ಪುತ್ರ

yatnal
Published on

ಬೆಂಗಳೂರು: ಸದನದಲ್ಲಿ ಇಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತೀವ್ರ ಅಸ್ವಸ್ಥಗೊಂಡು ಕುಸಿದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವಂಥ ಸನ್ನಿವೇಶ ಸೃಷ್ಟಿಯಾಗಿತ್ತು.

ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದಕ್ಕೆ ಇಂದು ಬಿಜೆಪಿಯ ಹತ್ತು ಸದಸ್ಯರ ಅಮಾನತು ಮಾಡಲಾಗಿದ್ದು, ಅವರನ್ನು ಮಾರ್ಷಲ್​ಗಳನ್ನು ಸದನದಿಂದ ಬಲವಂತವಾಗಿ ಹೊರಹಾಕಿದರು. ಈ ಸಂದರ್ಭದಲ್ಲಿ ಉಂಟಾದ ತಳ್ಳಾಟ ವೇಳೆ ಯತ್ನಾಳ್ ತೀವ್ರ ಅಸ್ವಸ್ಥಗೊಂಡು ಅಲ್ಲೇ ಕುಸಿದರು.

ಅಸ್ವಸ್ಥಗೊಂಡ ಅವರನ್ನು ವಿಧಾನಸೌಧದ ಆರೋಗ್ಯ ಸಿಬ್ಬಂದಿ ಕೂಡಲೇ ಆರೈಕೆ ಮಾಡಿದರು. ನಂತರ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.‌ ಆಸ್ಪತ್ರೆಯಲ್ಲಿ ಯತ್ನಾಳ್​ಗೆ ಚಿಕಿತ್ಸೆ ನೀಡಲಾಗಿದ್ದು, ಅವರ ಪತ್ನಿ ಶೈಲಜಾ ಹಾಗೂ ಪುತ್ರ ಹರ್ಷ ಆಸ್ಪತ್ರೆಗೆ ಧಾವಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net